ಜಿಟಿಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತ ಸ್ಥಳಕ್ಕೆ : ತಹಸೀಲ್ದಾರ್, ಆಯುಕ್ತರ ಭೇಟಿ

0
80

ಶಹಾಪುರ: ತಾಲ್ಲೂಕಿನಲ್ಲಿ ರಾತ್ರಿ ಇಡೀ ಧಾರಾಕಾರ ಮಳೆ ಸುರಿದಿದ್ದ ಪರಿಣಾಮ (ಗದ್ದುಗೆ) ನಾಗರಕೆರೆಯು ಸಂಪೂರ್ಣ ತುಂಬಿ, ಹೆಚ್ಚುವರಿ ನೀರು ಹಾದುಹೋಗುವ ರಸ್ತೆ ಹಾಗೂ ಮನೆಯ ಅಂಗಳಕ್ಕೆ ನುಗ್ಗಿವೆ. ಕೆಲವೊಂದು ಮನೆಯಲ್ಲಿರುವ ಧವಸ ಧಾನ್ಯಗಳು ಹಾಳಾಗಿವೆ ಮನೆಯ ಮುಂದುಗಡೆ ನಿಲ್ಲಿಸಿರುವ ಕಾರು ಮತ್ತು ಬೈಕ್ಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ.

ಇಲ್ಲಿ ಸರಿಯಾದ ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಇಲ್ಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

Contact Your\'s Advertisement; 9902492681

ಕೂಡಲೆ ಈ ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳ ಜಗನ್ನಾಥ ರೆಡ್ಡಿ ಹಾಗೂ ನಗರಸಭೆ ಆಯುಕ್ತರಾದ ರಮೇಶ್ ಪಟ್ಟೇದಾರ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರಸಭೆ ಸದಸ್ಯರಾದ ರಾಜು ಮಡ್ನಾಳ, ಶಿವಕುಮಾರ ತಳವಾರ, ಹಾಗೂ ಸ್ಥಳೀಯ ಮುಖಂಡರುಗಳಾದ ಸೈಯದ್ ಖಾದ್ರಿ, ಸಾಯಬಣ್ಣ ನಾಶಿ ಅಯ್ಯಪ್ಪ ನಾಶಿ, ಇಂಬ್ರಾನ್, ಶಿವಕುಮಾರ ಯಾದಗಿರಿ ಬಾಬುಗೋಡಿಯಾಳ್ ಶಿವಪ್ಪ ನಾಶಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here