ರಾಜಯೋಗಿನಿ ಬಿ.ಕೆ.ರತ್ನಾ ಅವರ ನಿಧನಕ್ಕೆ ವರ್ಮಾ ಶಾಲೆಯಿಂದ ಶ್ರದ್ಧಾಂಜಲಿ

0
94

ಶಹಾಬಾದ:ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಾಗೂ ಕಲಬುರಗಿ ಮತ್ತು ತೆಲಂಗಾಣ ವಿಭಾಗದ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ರತ್ನಾ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅನುದಾನಿತ ದೈಹಿಕ ಶಿಕ್ಷಕರ ಸಂಘದ ರಾಜ್ಯ ಚನ್ನಬಸಪ್ಪ ಕೊಲ್ಲೂರ್ ಹೇಳಿದರು.

ಅವರು ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ರಾಜಯೋಗಿನಿ ಬಿ.ಕೆ.ರತ್ನಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಅವರು ರಾಷ್ಟ್ರಭಾಷ ಶಿಕ್ಷಣ ಸಮಿತಿಯ ಹಿಂದಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಂತರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇರಿ ಅಪಾರ ಸೇವೆ ಸಲ್ಲಿಸಿದ್ದರು.ಅವರು ವಿವಿಧ ಭಾಷೆಗಳ ಹಿಡಿತ ಹಾಗೂ ಧಾರ್ಮಿಕ ಬೊಧನೆ ಎಲ್ಲರಿಗೂ ಅಚ್ಚರಿವುಂಟು ಮಾಡುತ್ತಿತ್ತು.ಅವರು ತಮ್ಮ ಜೀವನ ಪರ್ಯಂತ ರಾಜಯೋಗದ ಅಭಿವೃದ್ಧಿಗಾಗಿ ಶ್ರಮಿಸಿದವರು.ಸಾರ್ವಜನಿಕರಿಗೆ ಧಾರ್ಮಿಕ ಬೊಧನೆ ಮೂಲಕ ಸಮಾಜದಲ್ಲಿ ಶಾಂತಿ ಮೂಡಲು ಅವರ ಸೇವೆ ಅನನ್ಯ ಎಂದು ಹೇಳಿದರು.

ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರುಮಾತೆ ದಮಯಂತಿ ಸೂರ್ಯವಂಶಿ,ಮುಖ್ಯಗುರು ಸುಧೀರ ಕುಲಕರ್ಣಿ, ಉಪನ್ಯಾಸಕರಾದ ರಾಜಕುಮಾರ ಬಾಸೂತ್ಕರ್,ರಮೇಶ ವಾಲಿ, ಪ್ರಕಾಶ ಕೋಸಗಿಕರ್, ಪದ್ಮಶ್ರೀ ಜೋಷಿ,ಸಾಬಣ್ಣ ಗುಡ್ಲಾ, ಶರಣಪ್ಪ ಹಲಕರ್ಟಿ, ಸೌರಭ ವ್ಯಾಸ,ಶಿಕ್ಷಕರಾದ ಬಾಬಾ ಸಾಹೇಬ ಸಾಳುಂಕೆ,ಚನ್ನಬಸಪ್ಪ ಕೊಲ್ಲೂರ,ಮಹೇಶ್ವರಿ ಗುಳಿಗಿ,ವಸಂತ ಪಾಟೀಲ, ಅನೀಲಕುಮಾರ ಕುಲಕರ್ಣಿ,ಜಗದೇವಿ ಅಗಸ್ಥ್ಯತೀರ್ಥ,ಶಿರೋಮಣಿ ದಯಾಲ,ಮೀನಾಕ್ಷಿ, ವೀರಯ್ಯ ಹಿರೇಮಠ , ಸೂಗಯ್ಯ ಘಂಟಿಮಠ, ಶ್ರೀರಾಮ ಚವ್ಹಾಣ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here