ಬೆಳಿಗ್ಗೆಯಿಂದಲೇ ತಟ್ಟಿದ ಬಂದ್ ಬಿಸಿ: ಕೇಂದ್ರ ಬಸ್ ನಿಲ್ದಾಣ ರಸ್ತೆ ತಡೆದು ಪ್ರತಿಭಟನೆ

0
209

ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತ ವಿರೋಧಿ ನೀತಿ ಮತ್ತು ಮಸೂದೆ ಹಾಗೂ 11 ಸುಗ್ರೀವಾಜ್ಞೆಗಳು ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಿಸಾನ್ ಸಭಾ ಸೇರಿದಂತೆ 12 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಸೆಂಟ್ರಲ್ ಬಷ್ಟ್ಯಾಂಡ ಹತ್ತಿರ ಎಲ್ಲಾ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭಾರಿ ಬಂದೋ ಬಸ್ತ್ ನೀಡಿದ್ದು, ಸಾರಿಗೆ ಇಲಾಖೆ ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನೆ ಕಾವು ಎದುರಿಸುತ್ತಿರುವುದರಿಂದ ಯಾವುದೇ ಬಸ್ ಸಂಚಾರ ನಿಲ್ಲಿಸಿರುವ ದೃಶ್ಯ ಕಂಡು ಬಂತು.

Contact Your\'s Advertisement; 9902492681

ಈ ವೇಳೆಯಲ್ಲಿ ಸಿಪಿಐಎಂ ಮುಖಂಡರಾದ ಮಾರುತಿ ಮಾನ್ಪಡೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಅದೇ ರೀತಿ ಇಂದು ಪೂರ್ವಹ್ನ 11 :30 ಕ್ಕೆ ನಗರದ ನೆಹೆರೂ ಗಂಜ್ ನಗರೆಶ್ವರ ಶಾಲೆಯಿಂದ ರೈತರು ಕಾರ್ಮಿಕರು ಬೃಹತ್ ಪಾದಯಾತ್ರೆ ನಡೆಸಿ, ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಜಗತ್ ಸರ್ಕಲ್ ನಲ್ಲಿ ಸಭೆ ನಡೆಸಲಾಗುವುದೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.

ನಿನ್ನೆ ನಗರದ ಸುಪರ್ ಮಾರ್ಕೆಟ್ ಮತ್ತು ಗಂಜ್ ಪ್ರದೇಶದ ವ್ಯಾಪಾರಿಗಳಿಗೆ ಬಂದ್ ಗೆ ಬಂಬಲಿಸಲು ರೈತಪರ ಸಂಘಟನೆಗಳು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here