ಸುರಪುರ: ಕರ್ನಾಟಕದಲ್ಲಿ ಜಾರಿಗೆ ತರುತ್ತಿರುವ ಭೂ ಸುಧಾರಣಾ ಕಾಯಿದೆ ,ಎಪಿಎಮ್‍ಸಿ ಕಾಯಿದೆ ಹಾಗು ವಿದ್ಯೂತ್ ಕಾಯಿದೆ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಬೆಂಬಲಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಸುರಪುರ ಬಂದ್ ಆಚರಿಸಲಾಯಿತು.
ರೈತ ಕಾರ್ಮಿಕ ದಲಿತ ಮತ್ತು ಕನ್ನಡ ಪರ ಸಂಘಟನೆಗಳು ಹಾಗು ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಹೋರಾಟಕ್ಕೆ ಬೆಂಬಲಿಸಿ ನಡೆಸಿದ ಪ್ರತಿಭಟನೆಯಲ್ಲಿ ಸುಮಾರು ಐದು ನೂರಕ್ಕು ಹೆಚ್ಚು ಜನ ಪ್ರತಿಭಟನಾಕಾರರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿ ನಂತರ ಡಾ:ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತ್ತದಲ್ಲಿ ಬಂದು ಬಹಿರಂಗ ಸಮಾವೇಶ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರು.ಸರಕಾರ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆಯಿಂದ ರಾಜ್ಯದಲ್ಲಿನ ಎಲ್ಲಾ ಸಣ್ಣ ಸಣ್ಣ ರೈತರು ನಿರ್ನಾಮವಾಗಲಿದ್ದಾರೆ.ಬಂಡವಾಳ ಶಾಹಿಗಳು ಕೃಷಿ ವಲಯವನ್ನು ತಮ್ಮ ಕೈಗೆ ತೆಗೆದುಕೊಂಡು ಇತರರು ಕೃಷಿಯನ್ನೆ ಮಾಡದಂತೆ ಮಾಡಲಿದ್ದಾರೆ.ಇನ್ನು ಎಪಿಎಮ್‍ಸಿ ಕಾಯ್ದೆಯ ಮೂಲಕ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯೆ ಸಿಗದಂತೆ ಮಾಡಲು ಸರಕಾರ ಹೊರಟಿದೆ.ಕೂಡಲೆ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಮತ್ತು ಎಪಿಎಮ್‍ಸಿ ಕಾಯ್ದೆ ಜಾರಿ ಕೈ ಬಿಡಬೇಕು ಮತ್ತು ವಿದ್ಯೂತ್ ಕಾಯ್ದೆಯನ್ನು ರದ್ದು ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ರೈತ ಹೋರಾಟಗಾರ್ತಿ ಮಹಾದೇವಮ್ಮ ಬೇವಿನಾಳಮಠ ಅಯ್ಯಣ್ಣ ಹಾಲಬಾವಿ ದೇವಿಂದ್ರಪ್ಪಗೌಡ ಮಾಲಗತ್ತಿ ಮಲ್ಲಿಕಾರ್ಜುನ ಕ್ರಾಂತಿ ನಾಗಣ್ಣ ಕಲ್ಲದೇವನಹಳ್ಳಿ ಮಾಳಪ್ಪ ಕಿರದಳ್ಳಿ ರಾಹುಲ್ ಹುಲಿಮನಿ ಶಿವಲಿಂಗ ಹಸನಾಪುರ ಭೀಮರಾಯ ಸಿಂಧಗೇರಿ ವೆಂಕೋಬ ದೊರೆ ಉಸ್ತಾದ ವಜಾಹತ್ ಹುಸೇನ್ ಮಲ್ಲಯ್ಯ ಕಮತಗಿ ದೇವಿಂದ್ರಪ್ಪ ಪತ್ತಾರ ವೆಂಕಟೇಶ ನಾಯಕ ಬೈರಿಮರಡಿ ಅಹ್ಮದ್ ಪಠಾಣ್ ವೆಂಕಟೇಶ ಬೇಟೆಗಾರ ಹಣಮಂತ್ರಾಯ ಮಡಿವಾಳ ಮಾತನಾಡಿದರು.ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.
ಪಿಐ ಎಸ್.ಎಮ್ ಪಾಟೀಲ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿತ್ತು.ನಗರದ ಎಲ್ಲಾ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ನಿಲ್ಲಿಸಿ ಬಂದ್‍ಗೆ ಬೆಂಬಲಿಸಿದರು.ವಾಹನ ಸಂಚಾರ ಎಂದಿನಂತಿತ್ತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರಾಜಾ ಸಂತೋಷ ನಾಯಕ ರಾಜಾ ರಾಜಾಕುಮಾರ ನಾಯಕ ರಾಜಾ ವಿಜಯಕುಮಾರ ನಾಯಕ ರಾಮಣ್ಣ ಕಲ್ಲದೇವನಹಳ್ಳಿ ದಾವುದ್ ಪಠಾಣ್ ವೀರಭದ್ರಪ್ಪ ತಳವಾರಗೇರಾ ಅಬ್ದುಲ್ ಅಲೀಂ ಗೋಗಿ ಮಹೇಶ ಕರಡಕಲ್ ಸೇರಿದಂತೆ ಅನೇಕ ಜನರಿದ್ದರು.