ಸ್ವಾತಂತ್ಯ್ರ ಚಳುವಳಿಗೆ ಕಾಂತಿಯ ರೂಪ ಕೊಟ್ಟ ಭಗತ್‍ಸಿಂಗ್: ಪ್ರಕಾಶ ಅಂಗಡಿ

0
34

ಸುರಪುರ: ಭಾರತದ ಸ್ವಾತಂತ್ಯ್ರ ಚಳುವಳಿಗೆ ಕ್ರಾಂತಿಯ ಸ್ವರೂಪಕೊಟ್ಟು ಸ್ವಾತಂತ್ಯ್ರ ಚಳುವಳಿಯಲ್ಲಿ ನಿರ್ಣಾಯಕ ಪಾತ್ರವಹಿಸಿದವರಲ್ಲಿ ಭಗತ್‍ಸಿಂಗ ಕೂಡ ಒಬ್ಬರು ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.

ಸಗರನಾಡು ಯುವಕ ಸಂಘ ಕನ್ನೆಳ್ಳಿ ವತಿಯಿಂದ ರಂಗಂಪೇಟೆಯ ಖಾದಿ ಕೇಂದ್ರ ಆವರಣದಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ಶಾಹಿದ ಭಗತ್‍ಸಿಂಗ ಜನ್ಮ ದಿನಾಚಾರಣೆ ಹಾಗೂ ಫಿಟ್ ಇಂಡಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ್ಯದಿಂದಲೆ ದೇಶ ಪ್ರೇಮ ಬೆಳಸಿಕೊಂಡಿದ್ದ ಭಗತ್‍ಸಿಂಗ ನೌಜವಾನ್ ಭಾರತಸಭಾ, ಕಿರ್ತಿ ಕಿಸಾನ್ ಪಾರ್ಟಿ, ಗಣತಂತ್ರವಾದಿ ಸಂಘ ಇವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ವಾತಂತ್ಯ್ರ ಚಳುವಳಿಯಲ್ಲಿ ದುಮಕಿದರು.

Contact Your\'s Advertisement; 9902492681

ಜಲಿಯನ್ ವಾಲಾಭಾಗ ದುರಂತದಿಂದ ಬ್ರೀಟಿಶರ ವಿರುದ್ಧ ಕ್ರಾಂತಿಕಾರಕ ಚಳುವಳಿಗೆ ಹೊಸ ರೂಪ ಕೊಟ್ಟ ಭಗತ್‍ಸಿಂಗ್ ಅನೇಕ ಯುವಕರನ್ನು ತಯಾರಿಸಿ ಬ್ರೀಟಿಶರ ವಿರುದ್ಧ ಹೊರಾಟ ಮಾಡಿದ ಕೊನೆಗೆ ರಾಜಗುರು ಸುಖದೇವ ಅವರೊಂದಿಗೆ ದೇಶಕ್ಕಾಗಿ ಗಲ್ಲುಗಂಬಕ್ಕೆ ಹುತಾತ್ಮರಾದರು, ಅವರ ಸ್ವಾತಂತ್ಯ್ರ ಪ್ರೇಮ, ದೇಶ ಅಭಿಮಾನ, ಕ್ರಾಂತಿಕಾರಕ ಮನೋಭಾವ ಇಂದಿನ ಯುವಜನರಿಗೆ ಪ್ರೇರಣೆಯಾಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ವಿರೇಶ ಹಳಿಮನಿ, ಪ್ರಮುಖರಾದ ಧರ್ಮರಾಜ ಮಡಿವಾಳರ್, ಆನಂದ ಕುಂಬಾರ, ಲಿಂಗರಾಜ ಶಾಬಾದಿ, ಅಂಬ್ರೇಶ ಪರ್ತಾಬಾದ್, ಪ್ರವೀಣ ಜಕಾತಿ ಸೇರಿದಂತೆ ಇತರರಿದ್ದರು, ಬಸವರಾಜ ಚನ್ನಪಟ್ನ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here