ಕಡ್ಡಾಯವಾಗಿ ಮಾಸ್ಕ್ ಧರಿಸಿದಲ್ಲಿ ಕೊರೊನಾ ನಿರ್ಮೂಲನೆ ಮಾಡಲು ಸಾಧ್ಯವಿದೆ-ಬಿರಾದಾರ್

0
39

ಸುರಪುರ: ಕೊರೊನಾ ಇಂದು ದಿನೆ ದಿನೆ ಸೊಂಕು ಹೆಚ್ಚುತ್ತಿದ್ದು ಇದನ್ನು ಹೋಗಲಾಡಿಸಲು ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ ನಿರ್ಮೂಲನೆ ಸಾಧ್ಯವಿದೆ ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮಾತನಾಡಿದರು.

ನಗರಸಭೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್ ದಿನಾಚರಣೆಯ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ,ಕೊರೊನಾ ವೈರಸ್ ನಿರ್ಮೂಲನೆಗೆ ಅಧಿಕೃತವಾಗಿ ಮದ್ದು ದೊರೆತಿಲ್ಲವಾದರು ಅದನ್ನು ಎಲ್ಲರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವ ಹಾಗು ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುವ ಅಥವಾ ಸ್ಯಾನಿಟೈಜರ್ ಬಳಸುವ ಮೂಲಕ ವೈರಸ್ ಹರಡದಂತೆ ತಡೆಯಲು ಸಾಧ್ಯವಿದೆ ಎಂದರು.ಪ್ರತಿಯೊಬ್ಬರು ಇದರ ಬಗ್ಗೆ ಮುಂಜಾಗೃತೆ ವಹಿಸಬೇಕು ಇಲ್ಲವಾದಲ್ಲಿ ಕೊರೊನಾ ಸೊಂಕು ಪ್ರತಿಯೊಬ್ಬರಿಗೂ ಹರಡುವ ಸಾಧ್ಯತೆಯಿದೆ ಆದ್ದರಿಂದ ಅನಾವಶ್ಯಕವಾಗಿ ಮನೆಯಿಂದ ಹೊರ ಬರಬೇಡಿ,ಬಂದರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದರು.

Contact Your\'s Advertisement; 9902492681

ನಗರಸಭೆ ಪೌರಾಯುಕ್ತ ಶಾಂತಪ್ಪ ಮಾತನಾಡಿ,ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕೆಂದು ಜಾಗೃತಿ ಮೂಡಿಸಲು ಇಂದು ಮಾಸ್ಕ್ ದಿನ ಆಚರಿಸಲಾಗುತ್ತಿದೆ.ಒಂದು ವೇಳೆ ಮಾಸ್ಕ್ ಧರಿಸದೆ ಹೊರಗೆ ಬಂದವರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.ಆದ್ದರಿಂದ ಜನರು ಎಚ್ಚೆತ್ತುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದರು.

ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ನಗರದ ಹಳೆ ಬಸ್ ನಿಲ್ದಾಣದಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಿಂದ ಮಾಸ್ಕ್ ಜಾಗೃತಿ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತ್ತದಿಂದ ನಗರಸಭೆ ಕಾರ್ಯಾಲಯದವರೆಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಸದಸ್ಯರಾದ ಮಹ್ಮದ ಗೌಸ್ ಮಹ್ಮದ ಶರೀಫ್ ಬಸವರಾಜ ಮೇದಾಗಲ್ಲಿ ನಗರಸಭೆಯ ಅಧಿಕಾರಿಗಳಾದ ಓಂಕಾರೆಪ್ಪ ಪೂಜಾರಿ ಶಿವಪುತ್ರ ಎಸ್.ಐ ವೆಂಕಟೇಶ ಆರ್.ಒ ನರಸಪ್ಪ ಚವಲ್ಕರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here