ಸುರಪುರ: ನಗರದ ಬಿಜೆಪಿ ಕಚೇರಿ ಶಾಸಕ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಜಯಂತಿಯನ್ನು ಆಚರಿಸಲಾಯಿತು.ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಲಾರ್ಪಣೆ ಮಾಡಿ ನಮಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಮಹಾತ್ಮ ಗಾಂಧಿ ಒಬ್ಬ ಶಾಂತಿ ಧೂತನಾಗಿದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದರು.ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಭಾಗವಹಿಸಿದ್ದರು ಮಹಾತ್ಮ ಗಾಂಧಿ ಮುಂಚುಣಿಯಲ್ಲಿದ್ದರು,ಅಲ್ಲದೆ ಅವರ ಶಾಂತಿ ಮತ್ತು ದೇಶಪ್ರೇಮ ಇಂದಿಗೂ ಎಲ್ಲರಿಗು ಆದರ್ಶವಾಗಿದೆ.ಆದ್ದರಿಂದ ಇಂದು ಮಹಾತ್ಮ ಗಾಂಧಿಯನ್ನು ಇಡೀ ಜಗತ್ತೆ ನೆನಪಿಸಿಕೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಣ್ಣ ಬೇವಿನಾಳ ಯುವ ಮೋರ್ಚಾ ಅಧ್ಯಕ್ಷ ಶ್ರವಣಕುಮಾರ ನಾಯಕ ಮಲ್ಲಿಕಾರ್ಜುನ ಕನ್ನೆಳ್ಳಿ ಉದಯಕುಮಾರ್ ಸುರಪುರ ರವಿಕುಮಾರ ಚಿಕ್ಕನಹಳ್ಳಿ ಕೃಷ್ಣ ಮಂಗಿಹಾಳ ಯಮನಪ್ಪ ಕೂಡಲಗಿ ಮಹೇಶ ಜಾಲಿಬೆಂಚಿ ರುದ್ರಸ್ವಾಮಿ ಕೂಡಲಗಿ ವಿರುಪಾಕ್ಷಿ ಕೋನಾಳ ಸೇರಿದಂತೆ ಅನೇಕರಿದ್ದರು.