ಜೇವರ್ಗಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಣ್ಮರೆಯಾಗಿ ಗೂಂಡಾ ರಾಜ್ಯವಾಗಿದೆಯಾ ? ಎನ್ನುವುದು ಅನುಮಾನ ಮೂಡಿಸುತ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲ ! ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ರಾವಣ ರಾಜ್ಯವಾಗಿ ಕಂಗೊಳಿಸುತ್ತಿದೆ. ದಮನಿತರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಬಹುಜನ ಸಮಾಜ ಪಕ್ಷ ಪ್ರತಿಭಟನೆ ನಡೆಸಿ ಆರೋಪಿಸಿದೆ.
ಇತ್ತೀಚಿಗೆ ಉತ್ತರಪ್ರದೇಶದಲ್ಲಿ 19 ವರ್ಷದ ಯುವತಿಯನ್ನು ಅಮಾನವೀಯವಾಗಿ ಅತ್ಯಾಚಾರ ಕೊಲೆ ಖಂಡಿಸಿ ಆರೋಪಿಗಳಿ ಕಠಿಣ ಶಿಕ್ಷೆಗೆ ಒತ್ತಾಯಿ ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರಾದ ಯಮನೇಶನ್ ಅಂಕಲಗಿ ಇವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಈ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸರ್ಕಾರದ ಕುಮ್ಮಕ್ಕು : ಪ್ರತಿಭಟನೆ ಉದ್ದೇಶಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಮುಖಂಡರಾದ ಪ್ರಭಾಕರ್ ಸಾಗರ್ ಮಾತನಾಡುತ್ತಾ ಶೋಷಿತರು ಹಾಗೂ ಬಹು ಜನರಿಗೆ ರಕ್ಷಣೆ ಇಲ್ಲದಂತಾಗಿದೆ, ಚುಕ್ಕಾಣಿ ಹಿಡಿದಿರುವ ಸರಕಾರಗಳು ತಮ್ಮ ಸ್ವಾರ್ಥ ಸಾಧಿಸಲು ಸಾಮಾನ್ಯ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಕಿಡಿಕಾರಿದರು. ಬಿಜೆಪಿ ಸರಕಾರದ ನೀತಿಗಳಿಂದ ಮೇಲ್ವರ್ಗದ ಜನರು ಹಾಗೂ ಶ್ರೀಮಂತರು ತಮ್ಮ ಅಟ್ಟಹಾಸವನ್ನು ಕ್ರೌರ್ಯವನ್ನು ಮೆರೆಯುತ್ತಿದ್ದಾರೆ. ಇದಕ್ಕೆ ಸರ್ಕಾರ ಪರೋಕ್ಷ ರೀತಿಯಲ್ಲಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಬಹುಜನ ಸಮಾಜ ಪಕ್ಷದ ತಾಲ್ಲೂಕು ಅಧ್ಯಕ್ಷ ಯಮನೇಶ ಅಂಕಲಗಿ, ಜಿಲ್ಲಾ ಮುಖಂಡರಾದ ಪ್ರಭಾಕರ್ ಸಾಗರ,ಮಲ್ಲು ನೇದಲಗಿ ,ಪರಮಾನಂದ ಯಲಗೋಡ , ಭೀಮು ನೆಲೋಗಿ, ಮಲ್ಲು ಬಳ್ಳುಂಡಗಿ, ಅಬ್ದುಲ್ ಗನಿ, ಪ್ರದೀಪ್ ಬುಟನಾಳ, ವಿಶ್ವ ಆಲೂರ್ ಅಭಿಜಿತ್ ಮಯೂರ್, ಶಿವು ಹುಲ್ಲೂರು ಸರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.