ಕಲಬುರಗಿ: ಕಳೆದ ಎರಡು ದಿನಗಳ ಹಿಂದೆ ಕಮಲಾಪುರ ತಾಲೂಕಿನ ದಿನಸಿ (ಕೆ) ತಾಂಡಾದಲ್ಲಿ ಮಧ್ಯರಾತ್ರಿಯಲ್ಲಿ ನಡೆದ ದಂಪತಿಗಳಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಪೋಲಿಸರು 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾ ಗಿದ್ದಾರೆ.
ಮನೆಯ ಅಂಗಳದಲ್ಲಿ ಮಲಗಿಕೊಂಡಿದ್ದ ಮಾರುತಿ ಜಾಧವ್ (42) ಮತ್ತು ಶಾರದಾಬಾಯಿ (35) ಎಂಬ ದÀಂಪತಿಯನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣವನ್ನು 48 ಗಂಟೆಗಳಲ್ಲಿ ಬೇಧಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್ ತಿಳಿಸಿದರು.
ಮುಖ್ಯ ಆರೋಪಿ ಮಹೇಶ ಸೇರಿದಂತೆ ಟೋಬು ಅಲಿಯಾಸ ಸದಾಶಿವ ರಾಠೋಡ, ಸಂತೋಷ ರಾಠೋಡ, ರವಿ ರಾಠೋಡ, ಯೇಸು ರಾಠೋಡ ಎಂಬುವರನ್ನು ಬಂಧಿಸುವುದರೊAದಿಗೆ ಅವರು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲೆಗೀಡಾದ ದಂಪತಿಯ ಮಗಳಿಗೆ ಟೋಬು ಮತ್ತು ಮಹೇಶ ಚುಡಾಯಿಸಿದ್ದರಿಂದ ಮಾರುತಿ ದೂರು ನೀಡಿದ್ದರು. ಮಹೇಶನು ಆಕೆಯನ್ನು ಪ್ರೀತಿಸುತ್ತಿದ್ದ, ಮದುವೆಯಾಗುವ ವಿಷಯವಾಗಿ ಭಿನ್ನಾಭಿಪ್ರಾಯ ಮೂಡಿದಾಗ ಪೊಕ್ಸೊ ಕಾಯ್ದೆಯಡಿ ಅತ್ಯಾಚಾರ ಕೇಸ್ ದಾಖಲಿಸಿದ್ದರು. ತಾನು ಪ್ರೀತಿಸಿದಾಕೆ ತಿರುಗಿ ಬಿದ್ದದ್ದರಿಂದ ಆಕೆಯನ್ನು ಮುಗಿಸಲು ಮಹೇಶ ಹೊಂಚು ಹಾಕಿದ್ದ ಎನ್ನಲಾಗಿದೆ.
ಬಾಂಬೆಯಲ್ಲಿದ್ದ ಆತ ದಿನಸಿ ತಾಂಡಾದ ಮನೆಗೆ ಮಧ್ಯರಾತ್ರಿ ಬಂದಿದ್ದನ್ನು ಕಂಡ ದಂಪತಿ ಆತನನ್ನು ಹಿಡಿಯಲು ಯತ್ನಿಸಿದಾಗ ಇಬ್ಬರಿಗೂ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಆರೋಪಿತರನ್ನು ಬಂಧಿಸಲು ಗ್ರಾಮೀಣ ಸಿಪಿಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡದ ಪಿಎಸ್‌ಐಗಳಾದ ಭೀಮರಾಯ ಪಾಟೀಲ್, ಹುಸೇನಬಾಷಾ, ಕಮಲಾಪುರ ಮತ್ತು ಮಹಾಗಾಂವ ಠಾಣೆಯ ಸಿಬ್ಬಂದಿ ಕುಪೇಂದ್ರ, ರಾಜೇಂದ್ರಕುಮಾರರಡ್ಡಿ, ಕಿಶನ್ ಜಾಧವ, ಗುರುನಾಥ ರಡ್ಡಿ, ಶರಣಬಸಪ್ಪ, ರಮೇಶ, ರಾಜಶೇಖರ, ಅಶೋಕ ಇತರರು ಕೂಡಿಕೊಂಡು ಕಾರ್ಯಾಚರಣೆ ನಡೆಸಿ 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು. ಅಲ್ಲದೆ ವಿಶೇಷ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.