ಸುರಪುರ: ತಾಲೂಕಿನಲ್ಲಿ ಸರಕಾರದಿಂದ ಹತ್ತಿ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ,ಈ ಬಾರಿ ಮಳೆಯ ಕಾರಣದಿಂದ ರೈತರು ಬೆಳೆದ ಹತ್ತಿ ಬೆಳೆ ಅಲ್ಪ ಸ್ವಲ್ಪ ಕೈಗೆ ಬಂದಿದ್ದು ಈಗಾಗಲೆ ಹತ್ತಿ ಬಿಡಿಸುವ ಚಟುವಟಿಕೆ ಆರಂಭಗೊಂಡಿದೆ,ಆದರೆ ಸರಕಾರ ದಿಂದ ಹತ್ತಿ ಖರೀದಿ ಕೇಂದ್ರ ಇಲ್ಲವಾದ್ದರಿಂದ ರೈತರು ಖಾಸಗಿ ದಲ್ಲಾಳಿಯವರಿಗೆ ಮಾರಾಟ ಮಾಡುವುದರಿಂದ ಸರಿಯಾದ ಬೆಲೆಯು ಸಿಗದೆ ರೈತರು ಮತ್ತಿಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಈಗಾಗಲೆ ತಾಲೂಕಿನ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲದಿಂದ ಆತ್ಮಹತ್ಯೆಯ ಹಾದಿ ಹಿಡಿದಿದ್ದು ಇದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ,ಈಗ ಬಂದಿರುವ ಅಲ್ವಸ್ವಲ್ಪ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ರೈತರು ಮತ್ತಷ್ಟು ಕಷ್ಟಕ್ಕೆ ಇಡಾಗಲಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ಧಾವಿಸುವಂತೆ ವಿನಂತಿಸಿ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಾಹೇಬಗೌಡ ಮದಲಿಂಗನಾಳ ದೇವಿಂದ್ರಪ್ಪಗೌಡ ಪಾಟೀಲ್ ಮಾಲಗತ್ತಿ ವೆಂಕಟೇಶ ಕುಪಗಲ್ ಚಾಂದಪಾಶ ಮಾಲಗತ್ತಿ ಹಸನಪ್ಪ ಚಂದಣ್ಣ ಅಂಬ್ಲಪ್ಪ ಮಾಲಗತ್ತಿ ಧಾವರಪ್ಪ ಚವ್ಹಾಣ ಶಿವುಕಾಂತಮ್ಮ ದ್ಯಾವಪ್ಪ ಪರಮಣ್ಣ ಯಂಬದೊರೆ ಕುಪಗಲ್ ಇದ್ದರು.