ಕನ್ನೆಳ್ಳಿ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ ಆಟೋ ನಿಲ್ದಾಣ ಉದ್ಘಾಟನೆ

0
141

ಸುರಪುರ: ಇಂದು ಶ್ರಮಿಕರ ವರ್ಗದಲ್ಲಿ ಮೊದಲಿಗೆ ನಮ್ಮ ಆಟೋ ಚಾಲಕರು ನಿಲ್ಲುತ್ತಾರೆ,ಅವರ ಸೇವೆಯು ನಾಡಿನ ಏಳಿಗೆಯಲ್ಲಿ ಪಾತ್ರವಹಿಸುತ್ತದೆ ಎಂದು ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನರಡ್ಡಿ ಮಾತನಾಡಿದರು.

ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿನ ಚಿತ್ರನಟ ಶಂಕರನಾಗ್ ಅಭಿಮಾನಿಗಳಿಂದ ನಡೆದ ಶ್ರೀ ಗ್ರಾಮದೇವತೆ ಆಟೋ ನಿಲ್ದಾಣ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿ,ಬೆಂಗಳೂರಿನಂತಹ ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ ಚಾಲಕರು ಪ್ರತಿಯೊಬ್ಬನನ್ನು ಅವರಿಗೆ ಸರಿಯಾದ ಸ್ಥಳಕ್ಕೆ ತಲುಪಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ. ಕೇವಲ ದೊಡ್ಡ ದೊಡ್ಡ ನಗರಗಳು ಮಾತ್ರವಲ್ಲದೆ ಇಂದು ಪ್ರತಿ ಗ್ರಾಮಗಳಿಂದಲೂ ನಗರ ಪ್ರದೇಶಗಳಿಗೆ ಜನರನ್ನು ಕರೆದೊಯ್ಯುವ ಜವಬ್ದಾರಿ ಕೆಲಸವನ್ನು ಮಾಡುವ ಆಟೋ ಚಾಲಕರು ಸದಾ ಸ್ಮರಣಿಯರು.ಇಂದು ಕನ್ನೆಳ್ಳಿ ಗ್ರಾಮದ ಎಲ್ಲಾ ನಮ್ಮ ಆಟೋ ಚಾಲಕ ಮಿತ್ರರು ಶ್ರೀ ಗ್ರಾಮ ದೇವತೆ ಹೆಸರಲ್ಲಿ ಆಟೋ ನಿಲ್ದಾಣವನ್ನು ನಿರ್ಮಿಸಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಎಲ್ಲಾ ಶಂಕರನಾಗ್ ಅಭಿಮಾನಿ ಆಟೋ ಚಾಲಕರ ನೇತೃತ್ವದಲ್ಲಿ ಶ್ರೀ ಗ್ರಾಮ ದೇವತೆ ಆಟೋ ನಿಲ್ದಾಣದ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸುವ ಮೂಲಕ ನಿಲ್ದಾಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತ ತನಿಖೆದಾರ ಮಹೇಶ ಶಾಬಾದಿ ಆಟೋ ಚಾಲಕರಾದ ಸುರೇಶ ಗೋಡಿಹಾಳ ಮಲ್ಲು ಚಾನಕೋಟಿ ಯಲ್ಲಪ್ಪ ಚಿಕ್ಕನಹಳ್ಳಿ ಮಕ್ತುಂಬ ಮಲ್ಲು ಭಜಂತ್ರಿ ರಫೀಕ ಮುಲ್ಲಾ ದೇವಣ್ಣ ಬಡಿಗೇರ ಸಾಹೇಬಣ್ಣ ದೊರೆ ಚಿದಾನಂದ ಅಂಗಡಿ ಸಯ್ಯದ್ ಮುಲ್ಲಾ ಶೇಖಣ್ಣ ನಾಯ್ಕೋಡಿ ಸೋಮು ಕುಂಬಾರ ಸಲೀಮ್ ಮುಜೆವಾರ ದೇವು ಭಜಂತ್ರಿ ಪರಮಣ್ಣ ರಾಯಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here