ಕಲಬುರಗಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ಯವರಿಂದ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಲಬುರಗಿ ಜಿಲ್ಲೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಲು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಲು ಎಲ್ಲಾ ಯುವ ಪದಾಧಿಕಾರಿಗಳು ಮುಂದಾಗಬೇಕೇಂದು ಹೇಳಿದರು. ನೂತನ ಯುವ ಘಟಕವು ಸಮತೋಲಿತವಾಗಿದ್ದೂ, ಮುಂಬರುವ ದಿನಗಳಲ್ಲಿ ಸಕ್ರಿಯವಾಗಿ ಸಂಘಟನೆ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ನಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಮಾಡುವುದಾಗಿ ನುಡಿದರು.ಈ ಸಂದರ್ಭದಲ್ಲಿ ಉಭಯ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೆವಾಡಗಿ ಹಾಗೂ ಸಿದ್ದಾಜಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಗೋರಖನಾಥ ಶಾಖಾಪೂರೆ, ಶಶಿಧರ ಮಾಕಾ,ಮೆಘರಾಜ ಅರಳಿ ಶಾಹಬಾದ್,ನಾಗರಾಜ ಪಾಟೀಲ್ ಧರ್ಮಾಪುರ್, ಗಿರೀಶ್ ರಾಠೋಡ,ಶಂಭು ತುಕೋಜಿ,ವಿಕಾಸ ಕುಲಕರ್ಣಿ,ಶಿವು ಪಲ್ಲೆದ್ ಇದ್ದರು.