ಕಲಬುರಗಿ: ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್ ಕೆ ಸಿ ಯವರ ಸೂಚನೆ ಮೇರೆಗೆ ಕಲಬುರ್ಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಜಿಲ್ಲಾ ಉಪಾಧ್ಯಕ್ಷರಾದ ಶಿವ ಅಷ್ಠಗಿ ನೇತೃತ್ವದಲ್ಲಿ, ಪ್ರಧಾನ ಕಾರ್ಯದರ್ಶಿಯಾದ ವೀರೇಂದ್ರ ಪಾಟೀಲ ರಾಯಕೋಡ ಜೊತೆಗೂಡಿ ಪ್ರವಾಹ ಪೀಡಿತ ಪ್ರದೇಶ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂಕಷ್ಟಕೊಳಗಾದ ಜನರು ಅಹವಾಲು ಕೇಳಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಅಲ್ಲಿನ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಊಟದ ವ್ಯವಸ್ಥೆ ಮತ್ತು ಇತರೆ ಪ್ರಮುಖ ಸಮಸ್ಯೆಗಳ ಬಗ್ಗೆ ಕಮಲಾಪುರ ತಹಸೀಲ್ದಾರರಾದ ಅಂಜುಮ ತಬಸುಮ್ ರವರ ಜೊತೆ ಮಾಡನಾಡಿದರು.
ಸ್ಥಳದಲ್ಲಿದ್ದ ಗ್ರಾಮ ಪಂಚಾಯತ್ ಪಿಡಿಯೋ ರವರಿಗೆ ಶೌಚಾಲಯ ವ್ಯವಸ್ಥೆ ಮಾಡುವಂತೆ ತಿಳಿಸಿದಾಗ ಕೂಡಲೆ ೨ ಶೌಚಾಲಯದ ವ್ಯವಸ್ಥೆ ಮಾಡಿದರು.
ಇತರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪ ರವರ ನೇತೃತ್ವದ ರಾಜ್ಯ ಸರ್ಕಾರ ಪ್ರವಾಹ ಪೀಡಿತ ಜನರೊಂದಿಗಿದೆ ಮತ್ತು ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡ ರವರು ಕ್ಷೇತ್ರದ ಜನರೊಂದಿಗಿದ್ದಾರೆ ಎಂದು ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿಣಿ ಸದಸ್ಯರಾದ ಮೇಘರಾಜ್ ಅರಳಿ, ಬಿಜೆಪಿ ಯುವ ಮುಖಂಡರಾದ ರೇವಣಸಿದ್ದ ಬಡಾ, ಎಲಿಯಾಸ್ ಪಟೇಲ್, ಅಮೃತ್ ಸಾಗರ್, ದೇಶಮುಖ್ ಬಸವಣ್ಣನವರ, ಗಣೇಶ ಮಲಖೇಡ್, ಅಭಿಲಾಶ್ ಮದಿನಕರ್,ಬಸವರಾಜ್ ತಳವಾರ್,ಶಿವಲಿಂಗ ಸರಸಂಬಿ ಮತ್ತು ಯುವ ಮೋರ್ಚಾದ ಕಾರ್ಯಕರ್ತರು ಇದ್ದರು.