ಕಲಬುರಗಿ: ಕಮಲಾಪೂರ ಪಟ್ಟಣದ ಬಳಿ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದ್ದು, ಘಟನೆಯಲ್ಲಿ ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಮಲಾಪೂರ ತಾಲೂಕಿನ ಹೊಳಕುಂದಾ ಗ್ರಾಮದ ನಿವಾಸಿಯಾಗಿರುವ ನಾಗಮ್ಮ (50) ಮೃತಪಟ್ಟ ಮಹಿಳೆ. ಟಂಟಂ ಚಾಲಕ ಪತ್ನಿಯೊಂದಿಗೆ ಕಮಲಾಪೂರಗೆ ಸಂತೆಗಾಗಿ ತೆರಳುತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಹುಮನಾಬಾದ್ ನಿಂದ ಬರುತ್ತಿದ್ದ ಕ್ರೂಸರ್ ಡಿಕ್ಕಿ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಆಕೆ ಪತಿ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.