ಕಲಬುರಗಿ: ಭೀಮಾನದಿ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮದ ಸಂತ್ರಸ್ತರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭೀಮಾನದಿ ಆರ್ಭಕ್ಕೆ ಕಡಬೂರ್ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು ಒತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹವನ್ನೊ ಕಡಿಮೆಯಾಗಿದ್ದು ಸಂತ್ರಸ್ತರಿಗೆ ಮನೆಗಳತ್ತಾ ಮುಖಮಾಡಿದ್ದಾರೆ ಆದ್ರೆ ಏಕಾಏಕಿ ಬಂದ ರಣಭೀಕರ ಪ್ರವಾಹದಿಂದಾಗಿ ಮನೆಯಲ್ಲಿದ ಧವಸ ಧಾನ್ಯಗಳನ್ನು ನೀರುಪಾಲಾಗಿವೆ. ಇದರಿಂದ ಸಂತ್ರಸ್ತರಿಗೆ ಕುಟುಂಬಗಳಿಗೆ ಒತ್ತಿನ ಊಟಕ್ಕೂ ಪರಿತಪ್ಪಿಸುವಂತಾಗಿದೆ. ಆದರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ಘಟಕದ ವತಿಯಿಂದ ಗ್ರಾಮದ ಸುಮಾರು 80 ಬಡ ಕುಟುಂಬಕ್ಕೆ ದಿನನಿತ್ಯದ ಆಹಾರ, ಧಾನ್ಯದ ಕಿಟ್ ನ್ನು ವಿತರಿಸುತ್ತಿರುವುದಾಗಿ ಸಂಘ ಮುಖಂಡರಾದ ವೀರಣ್ಣ ಯಾರಿ ತಿಳಿಸಿದ್ದಾರೆ.
ವಿದ್ಯಾರ್ಥಿ ಪರಿಷತ್ತಿನ ಶರಣು ಅಲ್ಲೂರಕರ್, ಸಂತೋಷ ಅಲ್ಲೂರಕರ್, ಸಚಿನ್ ಎಚ್ ನಾಲವಾರಕರ್, ಎಸ್ ಎಸ್ ಎಲ್ ವಿ ಡಿ ಸಂಸ್ಥೆಯ ವಿದ್ಯಾರ್ಥಿಗಳಾದ ಅನಿಲ ನಾಯಿದ್,ರಾಜೇಶ್ ಜಾದವ್, ರವಿಚಂದ್ರ,ತೋಫಿಕ್, ಸೋಹಿಲ್,ಸುನಿಲ್, ಮೌನೇಶ್ ಬಳವಡಗಿ ಹಾಗು ಗ್ರಾಮದ ಶರಪ್ಪ ಪಸಾರ,ನಿಂಗಣ್ಣ ಪೂಜಾರಿ ಸೇರಿದಂತೆ ಇತರರು ಕಿಟ್ ವಿತರಣೆಯಲ್ಲಿ ಪಾಲ್ಗೊಂಡಿದ್ದರು.