ಕಲಬುರಗಿ: ರೈಲ್ವೆ ವಿಭಾಗೀಯ ಕಛೇರಿ ಸೇರಿದಂತೆ, ಸ್ಥಗಿತಗೊಂಡಿರುವ ಹಾಸನ ಸೋಲಾಪುರ ಮುಂತಾಗಿ ಎಲ್ಲಾ ರೈಲುಗಳು ಆರಂಭಿಸಬೇಕೆಂದು ಒತ್ತಾಯಿಸಿ ಇಂದು ಹೈದಾರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿಲಾಯಿತು.
ಇಂದು ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವ್ಯವಸ್ಥಾಪಕರಿಗೆ ಸಮಿತಿ ಮುಖಂಡರು ಭೇಟಿ ನೀಡಿ ರೈಲ್ವೆ ಪ್ರಯಾಣ ದರ ಕಡಿತಗೊಳಿಸಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ತ್ವರಿತ ಕತಿಯಲ್ಲಿ ಪೂರ್ಣಗೊಳಿಸಬೇಕು, ಸ್ಥಗಿತಗೊಂಡಿರುವ ರೈಲ್ವೆ ಸಂಚಾರ ಮರು ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಮನಿಶ್ ಜಾಜು, ಉಪಾಧ್ಯಕ್ಷ ಜ್ಞಾನಮಿತ್ರ, ಶಿವಲಿಂಗಪ್ಪ ಅಂಡಕ್, ಅಸ್ಲಮ್ ಚೊಂಗೆ, ಅಬ್ದುಲ್ ರಹೀಮ್,ಮ ಸುನೀಲ್ ಕುಲಕರ್ಣಿ, ಆನಂದ ದೇಶಪಾಂಡೆ, ಮಹಮ್ಮದ್ ಮೆರಾಜೊದ್ದೀನ್ ಸೇರಿದಂತೆ ಮುಂತಾದವರು ಇದ್ದರು.