ನೀರಿನ ಸಮಸ್ಯೆ ಬಗೆಹರಿಸಲು DYFI – SFI ಪ್ರತಿಭಟನೆ

0
45

ಕವಿತಾಳ: ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಷನ್ (DYFI) ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಹಾಗೂ ಕವಿತಾಳ ನವ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಹೋರಾಟ ವನ್ನು ಉದ್ದೇಶಿಸಿ ಮಾತನಾಡಿದ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಈ ಹಿಂದೆ ನೀರಿನ ಸಮಸ್ಯೆ ಕುರಿತು ಮುಖ್ಯಾಧಿಕಾರಿಗಳಿಗೆ SFI & DYFI ಅನೇಕ ಬಾರಿ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿ ಸಹಾಯಕ ಆಯುಕ್ತರು ಸಹ ಮುಖ್ಯಾಧಿಕಾರಿಗಳಿಗೆ ವಾರ್ಡಿನ ನೀರಿನ ಸಮಸ್ಯೆ ಬಗೆಹರಿಸಲು ಅಧಿಕೃತ ಪತ್ರದ ಮೂಲಕ ಸೂಚನೆ ನೀಡಿದ್ದರು. ದುರಂತ ಅಂದರೆ ಇಲ್ಲಿ ಸಹಾಯಕ ಆಯುಕ್ತರ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು SFI ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಜನರ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಮುಖ್ಯಾಧಿಕಾರಿಗಳು ಸೇರಿ ಇತರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ ವಾರ್ಡಿನ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ವಾರ್ಡಿನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಬೇಕು. 2 ನೇ ವಾರ್ಡಿನಲ್ಲಿ SBI ಬ್ಯಾಂಕ್ ಹಿಂದುಗಡೆ ಸಿ ಸಿ ರೋಡ್ ನ್ನು ರಸ್ತೆಯ ನಡುವಿನ ವಿದ್ಯುತ್ ಕಂಬಗಳದ ತೆರವು ಅಪೂರ್ಣ ಮಾಡಿ ರಸ್ತೆಯ ಮಧ್ಯದಲ್ಲಿ ಬಿಟ್ಟ ಕಂಬಗಳನ್ನ ತೆರವು ಮಾಡಬೇಕು. ಮತ್ತು ನಗರತ್ಖೋನದ ಬಾಕಿ ಕಾಮಗಾರಿಯನ್ನು ಪರಿಪೂರ್ಣ ಗೊಳಿಸಬೇಕು.

ಹತ್ತಾರು ವರ್ಷಗಳಿಂದ ಪಟ್ಟಣ ಜನಾತ ಕಾಲೋನಿ, ತ್ರೈಯಂಬಕೇಶ್ವರ ದೇವಸ್ಥಾನದ ಹಿಂಭಾಗ ಸೇರಿ ಇತರೆಡೆ  ನೆಲೆಸಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಹಾಗೂ ಪಟ್ಟಣ ಪಂಚಾಯತಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಹೋರಾಟಗಾರರು ಎಚ್ಚರಿಸಿದರು.

ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, DYFI ನಗರ ಅಧ್ಯಕ್ಷ ರಾದ ಮಹಮ್ಮದ್ ರಫೀ, SFI ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಸಂಘಟನೆಗಳ ಮುಖಂಡರಾದ ಮಹಾದೇವ ಬುಳ್ಳಾಪುರ, ನಾಗಮೋಗನ್ ಸಿಂಗ್,  ಮಲ್ಲಿಕಾರ್ಜುನ, ನಾಗರಾಜ ಸಾಹುಕಾರ್, ಬಸವರಾಜ ಸೇರಿ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here