ಸುರಪುರ: ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ಕಕ್ಕೇರಾ ಪುರಸಭೆಗೆ ಇಂದು ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಅಭ್ಯಾರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧವಾಗಿ ನೇಮಕಗೊಂಡಿದ್ದಾರೆ.
ಸಂಜೆ ೬ ಗಂಟೆ ವೇಳೆಗೆ ನಡೆದ ಚುನಾವಣೆ ಪ್ರಕ್ರೀಯೆಯಲ್ಲಿ ಚುನಾವಣಾಧಿಕಾರಿ ಸುರಪುರ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಇಬ್ಬರ ಆಯ್ಕೆಯನ್ನು ಘೋಷಿಸಿದರು.ಇದಕ್ಕೂ ಮುನ್ನ ಮದ್ಹ್ಯಾನ ೩ ಗಂಟೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಯಾಗಿತ್ತು,ಅದರಂತೆ ಬಿಜೆಪಿ ಬೆಂಬಲಿತ ಇಬ್ಬರು ಅಬ್ಯಾರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು.ಅದರಂತೆ ಸಂಜೆ ನಡೆದ ಘೋಷಣೆಯಲ್ಲಿ ಸಂಗೀತಾ ತಾಳಿಕೋಟೆ ಅಧ್ಯಕ್ಷ ಮತ್ತು ಅಯ್ಯಪ್ಪ ಗುಮೇದಾರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನಂತರ ಶಾಸಕ ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಆಗಮಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಶುಭ ಹಾರೈಸಿದರು.ನಂತರ ಎಲ್ಲಾ ಸದಸ್ಯರು ಹಾಗು ಮುಖಂಡರು ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪುರಸಭೆ ಬಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು.
ನಂತರ ಶಾಸಕ ರಾಜುಗೌಡ ಮಾತನಾಡಿ,ಇದುವರೆಗೆ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ತುಂಬಾ ತೊಂದರೆ ಪಟ್ಟಿರುವಿರಿ ಈ ಮುಂದೆ ಎಲ್ಲರು ಒಂದಾಗಿ ಸೇರಿ ಸುಂದರ ಕಕ್ಕೇರಾ ಪಟ್ಟಣ ನಿರ್ಮಾಣಕ್ಕೆ ಕೆಲಸ ಮಾಡುವಂತೆ ಹಾಗು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಹೆಚ್.ಸಿ ಪಾಟೀಲ್ ತಾಲೂಕು ಬಿಜೆಪಿ ಅಧ್ಯಕ್ಷ ಮೇಲಪ್ಪ ಗುಳಗಿ ಅಮರಣ್ಣ ಹುಡೇದ್ ಶಾಂತಗೌಡ ಚನ್ನಪಟ್ಟಣ ಬಸನಗೌಡ ಅಳ್ಳಿಕೋಟೆ ಪ್ರಕಾಶ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.