ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ಪಠಾಣಗೆ ಮನವಿ

0
160

ಕಲಬುರಗಿ: ನಗರಕ್ಕೆ ಆಗಮಿಸಿದ ಕರ್ನಾಟಕ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಖ್ತಾರ ಹುಸೇನ್ ಫ. ಪಠಾಣ ಅವರಿಗೆ ಅಲ್ಪ ಸಂಖ್ಯಾತರಾದ ಅಖಿಲ ಭಾರತ ಕ್ರೈಸ್ತ ಸಮುದಾಯಕ್ಕೆ ಕೆ.ಎಮ್.ಡಿ.ಸಿ.ಯಲ್ಲಿ ಸಿಗುವ ಯೋಜನೆ ದಲ್ಲಿ ಸರಿಯಾಗಿ ಅನುಪಾತ ನೀಡಬೇಕೆಂದು ಅಖಿಲ ಭಾರತ ಕ್ರೈಸ್ತ ಮಹಾಸಭಾದ ರಾಷ್ಟ್ರ ಉಪಾಧ್ಯಕ್ಷ ಸಂಧ್ಯಾ ರಾಜ್ ಸಾಮುಯೆಲ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಸಾಲೆ ಅವರು ಮನವಿ ಪತ್ರ ಸಲ್ಲಿಸಿ ಮಾತನಾಡುತ್ತಾ ನಿಗಮ-ಮಂಡಳಿಗಳಲ್ಲಿ ನಿರ್ದೇಶಕರನ್ನಾಗಿ ಕನಿಷ್ಠ ಇಬ್ಬರನ್ನು ನೇಮಕ ಮಾಡಿಕೊಳ್ಳಬೇಕು.

ಕೆ.ಎಂ.ಡಿ.ಸಿ.ಯಿಂದ ಬರುವ ಯೋಜನೆಗಳ ಮಾಹಿತಿಗಳು ನಮ್ಮ ಸಮುದಾಯಕ್ಕೆ ಸರಿಯಾದ ರೀತಿಯಲ್ಲಿ ತಲುಪುವಂತೆ ಮಾಡಿಕೊಳ್ಳಬೇಕು. ಪ್ರತಿ ಜಿಲ್ಲೆಯಿಂದ ಬರುವ ನಮ್ಮ ಸಮುದಾಯದ ಅರ್ಜಿಗಳು ೨೫%ರಂತೆ ಮೀಸಲಾತಿ ನೀಡಬೇಕು ಮನವಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಕ್ರೈಸ್ತ ಧರ್ಮಗುರುಗಳು ಹಾಗೂ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here