ಕಲಬುರಗಿ: ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮೆಕ್ರೋಪ್ರವಾದಿ ಮುಹಮ್ಮದ್ ಪೈಗಂಬರ್‌ನ್ನು ನಿಂಧಿಸಿರುವುದನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೋಮುಭಾವನೆಯನ್ನು ಕೆರಳಿಸುತ್ತಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮೆಕ್ರೋ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಶಾಂತಿ, ಸೌಹಾರ್ದತೆ ಧಕ್ಕೆ ತರುವ ಯಾರೊಬ್ಬರು ಉನ್ನತ ಹುದ್ದೆಯಲ್ಲಿ ಕೂರಲು ಯೋಗ್ಯರಲ್ಲವೆಂದು ಪ್ರತಿಭಟನಾಕಾರರು ಫ್ರಾನ್ಸ್ ಅಧ್ಯಕ್ಷರ ವಿರುದ್ದ ಘೋಷಣೆ ಕೂಗಿದರು.
ಇವತ್ತು ಜಗತ್ತು ಕೋವಿಡ್‌ನಿಂದ ನರಳುತ್ತಿದೆ. ಪ್ರತಿದಿನ ಜಗತ್ತಿನಾದ್ಯಂತ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಗಳನ್ನು ಒಂದು ರಾಷ್ಟ್ರದ ಅಧ್ಯಕ್ಷ ನೀಡುವುದು ಎಷ್ಟು ಸರಿ. ಈ ಹಿನ್ನೆಲೆಯಲ್ಲಿ ಯೂರೋಪಿನ ಒಕ್ಕೂಟವು ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಬೇಕೆಂದು ಒತ್ತಾಯಿಸಿದರು.