ಶಹಾಬಾದ:ಕೇಂದ್ರ ಸರಕಾರದ ಜನವಿರೋಧಿ ಕಾಯ್ದೆ ತಿದ್ದುಪಡಿ ಖಂಡಿಸಿ ನವೆಂಬರ್ 26 ರಂದು ಅಖಿಲ ಭಾರತ ಮುಷ್ಕರದ ನಿಮಿತ್ತವಾಗಿ ವಿವಿಧ ಸಂಘಟನೆಗಳ ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿಐಟಿಯು ತಾಲೂಕಾ ಅಧ್ಯಕ್ಷೆ ಶೇಕಮ್ಮ ಕುರಿ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಕೇಂದ್ರ ಸಕರ್ಾರದ ಜನವಿರೋಧಿ ಕಾಯ್ದೆ ತಿದ್ದುಪಡಿ ಖಂಡಿಸಿ ನವೆಂಬರ್ 26 ರಂದು ಅಖಿಲ ಭಾರತ ಮುಷ್ಕರದ ನಿಮಿತ್ತವಾಗಿ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಕಾಯ್ದೆ, ರೈತ ವಿರೋಧಿ ಕಾಯ್ದೆ ತಿದ್ದುಪಡಿ, ರೇಲ್ವೆ ಖಾಸಗೀಕರಣ, ಭೂ ಕಾಯ್ದೆ ತಿದ್ದುಪಡಿ, ಎಪಿಎಮ್ಸಿ ಕಾಯ್ದೆ ತಿದ್ದುಪಡಿ, ನೂತನ ಶಿಕ್ಷಣ ನೀತಿ ಹಾಗೂ ವಿದ್ಯುತ್ ಖಾಸಗೀರಣ ಮಾಡಲು ಹೊರಟಿದೆ.ಇದರಿಂದ ಲಕ್ಷಂತರ ಜನರು ಕೆಲಸಗಳನ್ನು ಕಳೆದುಕೊಂಡು ಬೀದಿಗೆ ಬರುವಂತಾಗುತ್ತದೆ.ರೈತರ ಪಾಲಿಗೆ ಮರಣ ಶಾಸನವಾಗುತ್ತದೆ.ಕಾರ್ಮಿಕರಿಗೆ ಧ್ವನಿಗೆ ಯಾವುದೇ ಬೆಲೆಯಿಲ್ಲದಂತಾಗುತ್ತದೆ.ಈ ಕಾಯ್ದೆಗಳ ತಿದ್ದುಪಡಿ ಕೇವಲ ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಎಂಬುದು ಎಲ್ಲರಿಗೂ ಮನವರಿಗೆಯಾಗಿದ್ದು, ಈ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಸಿಐಟಿಯು, ಕಟ್ಟಡ ಕಾರ್ಮಿಕ ಸಂಘ, ಗ್ರಾಪಂ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘಟನೆಗಳು ಸೇರಿಕೊಂಡು ನವೆಂಬರ್ 26ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೆವೆ ಎಂದು ಹೇಳಿದರು.ಅಲ್ಲದೇ ಅತಿಯಾದ ಮಳೆಯಿಂದ ರೈತರು ಬೆಳೆದ ಎಲ್ಲಾ ಬೆಳೆಗಳು ಹಾಳಾಗಿವೆ.ಲ್ಲದೇ ನಂತರ ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹದಿಂದಲೂ ಮನೆಗಳಿಗೆ ಹಾಗೂ ರೈತರ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಾಮಣದ ನಷ್ಟವಾದರೂ ಇಲ್ಲಿಯವರೆಗೆ ನಷ್ಟ ಹೊಂದಿದ ಜನರಿಗೆ ಹಾಗೂ ರೈತರಿಗೆ ಪರಿಹಾರ ಒದಗಿಸಲು ಸರಕಾರ ಮುಂದೆ ಬಂದಿಲ್ಲ.ಆದರೆ ಬಂಡವಾಳಶಾಹಿಗಳ ಪರ ಮುಂದೆ ಬರುತ್ತಿರುವುದು ನಾಚಿಕೆಗೇಡಿನ ಸಂಗತಿ.ಆದ್ದರಿಂದ ಇದನ್ನು ವಿರೋಧಿ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೆವೆ ಎಂದು ಹೇಳಿದರು.
ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ ರಾಯಚೂರಕರ್,ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಸಂಪತ್ತಕುಮಾರಿ, ಕಾಂರ್ಇಕ ಮುಖಂಡ ರಾಮು ಜಾಧವ ಇತರರು ಇದ್ದರು.