ಆಳಂದ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರಗತಿಯ ವೇಗ ದೊರತಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ತಾಲೂಕಿನ ತಡಕಲ ಗ್ರಾಮದಲ್ಲಿ ಪಿಎಮ್‌ಜಿಎಸ್‌ವೈ ಯೋಜನೆಯ ಅಡಿಯಲ್ಲಿ ೪.೬೪ ಕೋಟಿ ರೂ. ವೆಚ್ಚದ ತಡಕಲದಿಂದ ಜಮಗಾ (ಆರ್) ಗ್ರಾಮದ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಕೊರೋನಾ, ನೆರೆ ಪ್ರವಾಹದಿಂದ ಆರ್ಥಿಕ ಹೊಡೆತ ಉಂಟಾಗಿದ್ದರೂ ಸಹ ಅಭಿವೃದ್ಧಿ ಕಾರ್ಯಕ್ಕೆ ಬಿಎಸ್‌ವೈ ಸರ್ಕಾರ ಬದ್ಧವಾಗಿದೆ ಈ ನಿಟ್ಟಿನಲ್ಲಿ ರಾಜ್ಯದ ಅನೇಕ ಕಾಮಗಾರಿಗಳಿಗೆ ಮಂಜೂರಿ ನೀಡಿದೆ ಎಂದರು.
ತಡಕಲ- ಜಮಗಾ ಆರ್ ರಸ್ತೆಯ ಸುಧಾರಣೆಯಿಂದ ನೆರೆಯ ರಾಜ್ಯದ ಉಮರ್ಗಾ ರಾಜ್ಯಕ್ಕೆ ತುಂಬಾ ಹತ್ತಿರವಾಗಲಿದೆ ಮತ್ತು ಸಮಯದ ಉಳಿತಾಯವೂ ಆಗಲಿದೆ. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಹಣಮಂತರಾವ ಮಲಾಜಿ, ಅಶೋಕ ಗುತ್ತೇದಾರ, ಶಿವಪುತ್ರಪ್ಪ ಬೆಳ್ಳೆ, ತಾ.ಪಂ ಸದಸ್ಯ ಸಿದ್ದಾರಾಮ ವಾಘ್ಮೋರೆ, ತಾ.ಪಂ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಬಸವರಾಜ ಪಾಟೀಲ, ನಿಜಲಿಂಗಪ್ಪ ಅಲೋಜಿ, ಶ್ರೀಶೈಲ ಅಲೋಜಿ, ಮಹೇಶ ಬಿರಾದಾರ, ಧನರಾಜ ಪಾಟೀಲ, ರಘುನಾಥ ಪಾಟೀಲ, ರಾಜಕುಮಾರ ಮೂಲಗೆ, ಸಂಜೀವಕುಮಾರ ಸಂಗೋಳಗಿ, ಬಸವರಾಜ ಅಲೋಜಿ, ಚಂದ್ರಕಾಂತ ಪಾಟೀಲ, ಶಿಚಶಂಕರ ಪಾಟೀಲ, ಗೋಪಾಲರಾವ ಬಿರಾದಾರ ಸೇರಿದಂತೆ ಇತರರು ಇದ್ದರು.