ಶಹಾಬಾದ:ಅಂಗಲವಿಕರಿಗೆ ಮೀಸಲಿಟ್ಟ ಹಣ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ಸಂದಾಯ ಮಾಡಬೇಕೆಂದು ಆಗ್ರಹಿಸಿ ಶನಿವಾರ ತಾಪಂ ಕಾರ್ಯಾಲಯದ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಂಗವಿಕಲ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಶೋಕ ಮ್ಯಾಗೇರಿ ಮಾತನಾಡಿ, ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊನಗುಂಟಾ ಗ್ರಾಪಂಯಲ್ಲಿ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಅಂಗವಿಕಲರಿಗೆ ಮೀಸಲಿಟ್ಟ 5% ಅನುದಾನವನ್ನು ಹಂಚಿಕೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಫಲಾನುಭವಿಗಳಿಗೆ ತಾಂತ್ರಿಕ ದೋಷದಿಂದ ಹಣ ಸಂದಾಯವಾಗಿಲ್ಲ.ಈ ಬಗ್ಗೆ ಕೇಳಿದರೇ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಅವರಿಗೆ ಮನವಿ ಸಲ್ಲಿಸಿದ್ದೆವೆ. ಅವರು ಕೂಡಲೇ ಸಂದಾಯ ಮಾಡಲಾಗುವುದೆಂದು ಭರವಸೆ ನೀಡಿದ್ದರು.ಆದರೆ ತಿಂಗಳುಗಳೇ ಕಳೆದರೂ ಭರವಸೆ ಮಾತ್ರ ಈಡೇರಿಲ್ಲ.ಅಲ್ಲದೇ ಪ್ರತಿಭಟನೆ ಇರುವ ಬಗ್ಗೆ ಗೊತ್ತಿದ್ದರೂ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ರಜೆ ಹಾಕಿ ಹೋಗಿದ್ದಾರೆ.ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹೊನಗುಂಟಾ ಗ್ರಾಪಂಯ 14ನೇ ಹಣಕಾಸು ಯೋಜನೆಯಡಿ ಅಂಗವಿಕಲರಿಗೆ ನೀಸಲಿಟ್ಟ 5% ಅನುದಾನವನ್ನು ಹಂಚಿಕೆ ಮಾಡಬೇಕು. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಫಲಾನುಭವಿಗಳಿಗೆ ತಾಂತ್ರಿಕ ದೋಷದಿಂದ ಹಣ ಸಂದಾಯವಾಗದವರಿಗೆ ಸರಿಪಡಿಸಿ ಕೂಡಲೇ ಹಣ ಸಂದಾಯ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಅಂಗವಿಕಲ ಹೋರಾಟ ಸಮಿತಿ ಅಧ್ಯಕ್ಷ ಮಲ್ಲೇಶಿ ಭಜಂತ್ರಿ, ಶೇಕಮ್ಮ ಕುರಿ, ಸಂಪತ್ತಕುಮಾರಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗಪ್ಪ ರಾಯಚೂರಕರ್, ರಾಜು ಕಮಕನೂರ,ಕಲ್ಯಾಣಿ ಅಲ್ಲೂರ್,ಮಲ್ಲಿಕಾರ್ಜುನ ನಾಲವಾರ,ಬಸಲಿಂಗ,ಶರಣು ಬನ್ನೆಪ್ಪ,ಬಸವರಾಜ, ಸರುಬಾಯಿ ಭಂಕೂರ,ಮಲ್ಲಮ್ಮ ಭಂಕೂರ,ವಿಜಯಲಕ್ಷ್ಮಿ ಇದ್ದರು. ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಕರವೇ ಹೊನಗುಂಟಾ ಘಟಕದ ಅಧ್ಯಕ್ಷ ವಿಶ್ವರಾಜ ಫಿರೋಜಬಾದ, ದಲಿತ ವಿದ್ಯಾರ್ಥಿ ಒಕ್ಕೂಟ ತಾಲೂಕಾ ಸಂಚಾಲಕ ಪೂಜ ಪ್ಪ ಮೇತ್ರೆ ಬೆಂಬಲ ವ್ಯಕ್ತಪಡಿಸಿದರು.