ಕಲಬುರಗಿ: ಜಿಲ್ಲೆ ಜೇವರ್ಗಿ ತಾಲೂಕಿನ ಹರನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬರುಗಿ ಹಾಗೂ ರೂಢಾ ಸಂಸ್ಥೆ,ಧಾರವಾಡ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಹಂಚಿನಾಳ ಎಸ್ ಗ್ರಾಮದಲ್ಲಿ ಮನೆ ನಳ ಸಂಪರ್ಕ ನೀಡಲು ವಿಶೇಷ ಗ್ರಾಮ ಸಭೆ ಏರ್ಪಡಿಸಲಾಗಿತ್ತು.
ಹಂಚಿನಾಳ ಗ್ರಾಮದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು , ಸದರಿ ಕಾಮಗಾರಿ ಕೈಗೊಳ್ಳಲು ಗ್ರಾಮಸ್ಥರ ಸಹಭಾಗಿತ್ವ ಅಗತ್ಯವೆಂದು ಹಾಗೂ ಸಮುದಾಯ ವಂತಿಕೆ ಅವಶ್ಯಕವೆಂದು ಜಲಜೀವನ ಮಿಷನ್ ಯೋಜನೆಯ ಡಿ.ಪಿ.ಎಂ ಡಾ.ರಾಜು ಕಂಬಾಳಿಮಠ ತಿಳಿಸಿದರು ಹರನೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಮಹಾದೇವ ದ್ಯಾಮ ರವರು ಮಾತನಾಡುತ್ತ ಯೋಜನೆ ಸಫಲತೆಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವೆಂದರು ಈಗಾಗಲೇ ಊರಿನ ನೈರ್ಮಲ್ಯತೆಗಾಗಿ ಶೌಚಾಲಯ,ಇಂಗುಗುಂಡಿ ನಿರ್ಮಿಸಲಾಗಿದ್ದು , ಇನ್ನು ಬೇಡಿಕೆ ಇದ್ದಲ್ಲಿ ಮಾಡಿ ಕೊಡಲಾಗುವುದು ಎಂದರು.
ರೂಡಾ ಸಂಸ್ಥೆ ತಂಡ ನಾಯಕರಾದ ಸಂತೋಷ ಮೂಲಗೆ ರವರು ಮಾತನಾಡಿ ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಮುಂದಿನ ದಿನಗಳಲ್ಲಿ ಪ್ರತಿ ಹಂತದಲ್ಲಿ ಯೋಜನೆ ಕುರಿತು ತರಬೇತಿ ನೀಡಲಾಗುವುದೆಂದರು. ಗ್ರಾಮೀಣ ಕುಡಿಯುವ ನೀರು ಇಲಾಖೆಯ ಇಂಜೀನಿಯರ್ ಬಿಲಾಲ್ ಸತ್ತಾರ್ ರವರು ಕಾರ್ಯಾತ್ಮಕ ನಳದ ರಚನೆ ಮತ್ತು ವಿನ್ಯಾಸ್ ಬಗ್ಗೆ ತಿಳಿಸಿದರು ,ಸಂಪನ್ಮೂಲ ವ್ಯಕ್ತಿ ಶ್ರವಣ ಕುಮಾರ ಅಕ್ಕಿಮನಿ ಮತ್ತು , ಮಾತನಾಡುತ್ತ ಶಾಲೆ, ಅಂಗನವಾಡಿ ಗಳಿಗೆ ನಳ ಸಂಪರ್ಕವನ್ನು ವಿಶೇಷ 100 ದಿನಗಳ ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಇಂಜೀನಿಯರ್ ರಾಜಕುಮಾರ ರವರು ಗ್ರಾಮ ನಕ್ಷೆ ಹಾಕಿ ಯೋಜನೆ ಬಗ್ಗೆ ತಿಳಿಸಿದರು.
ಊರಿನ ಮುಖಂಡರಾದ ದಾವುಜಪ್ಪ ,ತಿಪ್ಪಣ್ಣ ಗೌಡ,ಯಮನಪ್ಪ, ಮೌನೇಶಗೌಡ ಸಮುದಾಯ ವಂತಿಕೆ ಕೊಡಲು ಒಪ್ಪಿದರು, ಶಾಲಾ ಶಿಕ್ಷಕರಾದ ಶಿವಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.