ಟಿ.ವಿ.ಶಿವಾನಂದನ್ ಅವರ “ಆರ್ಟ್ ಆಫ್ ರಿಪೋಟಿಂಗ್” ಪುಸ್ತಕ ಲೋಕಾರ್ಪಣೆ

0
91

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜೀ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀಯವರು ಹಿರಿಯ ಪತ್ರಕರ್ತ ಹಾಗೂ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ. ಶಿವಾನಂದನ್ ಅವರು ರಚಿಸಿದ “ಆರ್ಟ್ ಆಫ್ ರಿಪೋಟಿಂಗ್” ಪುಸ್ತಕವನ್ನು ಶನಿವಾರ ಲೋಕಾರ್ಪಣೆಗೊಳಿಸಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಪೂಜ್ಯ ಡಾ.ಅಪ್ಪಾಜಿ, ಈ ಪುಸ್ತಕವು  ಶಿವಾನಂದನ್‌ರವರ ಪತ್ರಿಕೋದ್ಯಮ ಪ್ರಪಂಚದಲ್ಲಿನ ಅಪಾರ ಅನುಭವದ ಫಲಿತಾಂಶವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮುದ್ರಣ ಮತ್ತು ವಿದ್ಯುನ್ಮಾಧ್ಯಮದ ಕಲಿಕೆಗೆ ಅವಶ್ಯಕತೆಯ ಅಂಶಗಳನ್ನು ಒಳಗೊಂಡಿದೆ. ಸರಳ ಇಂಗ್ಲಿ? ಭಾಷೆಯಲ್ಲಿ ಬರೆದ ಈ ಕೃತಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಮಾಧ್ಯಮದ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಹಲವು ಅಂಶಗಳನ್ನು ಅರ್ಥೈಸುವ ದಾರಿ ದೀಪವಾಗಿದೆ ಎಂದರು.

Contact Your\'s Advertisement; 9902492681

ಪೂಜ್ಯ ಅಪ್ಪಾಜಿ ಅವರು ಮಾತುಗಳನ್ನು ಮುಂದುವರೆಸುತ್ತಾ, ಈ ಪುಸ್ತಕವು ಮುಖ್ಯವಾಗಿ ಸುದ್ದಿ ಹೇಗೆ ಬರೆಯಬೇಕು. ಸುದ್ದಿ ಬರೆಯುವ ಹಿನ್ನೆಲೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಯಪಡಿಸುತ್ತದೆ. ಉದಯೋನ್ಮುಖ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮ ಜಗತ್ತಿನಲ್ಲಿ ತಮ್ಮ ಪುಟ್ಟ ಹೆಜ್ಜೆಗಳನ್ನಿಡುವ ಪ್ರಕ್ರಿಯೆಯಲ್ಲಿರುವವರಿಗೆ ಸಲಹೆಗಳನ್ನು ನೀಡುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿಗಳಲ್ಲಿ ತಮ್ಮನ್ನು ತಾವು ಹೇಗೆ ಗುರುತಿಸಿಕೊಳ್ಳಬೇಕು. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ವಿಚಾರಣೆಯನ್ನು ಹೇಗೆ ವರದಿ ಮಾಡಬೇಕು ಎನ್ನುವ ಅಂಶಗಳನ್ನು ತಿಳಿಯಪಡಿಸುತ್ತದೆ ಎಂದು ವಿವರಿಸಿದರು.

ಆರ್ಟ್ ಆಫ್ ರಿಪೋಟಿಂಗ್ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪೂರ್ಣಗೊಳಿಸಿದ ನಂತರ ಹೊಸದಾಗಿ ವೃತ್ತಿಯಲ್ಲಿ ಪ್ರವೇಶಿಸುವ ಎಲ್ಲಾ ಉದಯೋನ್ಮುಖ ಪತ್ರಕರ್ತರಿಗೆ ಯೋಗ್ಯವಾದ ಕೈಪಿಡಿಯಾಗಿದೆ” ಎಂದು ಡಾ. ಅಪ್ಪಾಜಿ ಹೇಳಿದರು.

ಪುಸ್ತಕ ಬಿಡುಗಡೆಗೊಳಿಸಿದ ಡಾ. ಅಪ್ಪಾಜೀಯವರ ಮಾತುಗಳನ್ನು ಪ್ರಸಂಶಿಸಿದ ಡಾ. ಅವ್ವಾಜಿಯವರು, ಶರಣಬಸವ ವಿಶ್ವವಿದ್ಯಾಲಯದ ಸದಸ್ಯರೊಬ್ಬರು ಜ್ಞಾನದ ಭಂಡಾರ ಹೊರತಂದಿದ್ದು ಅತೀ ಸಂತೋಷದ ಸಂಗತಿಯಾಗಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದ ಪ್ರಾಯೋಗಿಕ ಜ್ಞಾನವನ್ನೊಳಗೊಂಡ ಈ ಕೃತಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ, ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇ?ನ್ ವಿಭಾಗದ ಮುಖ್ಯಸ್ಥ ಡಾ.ಕಿರಣ್ ಮಾಕಾ ಮತ್ತು ಪ್ರಕಾಶಕರು ಎಸ್.ಎಸ್.ಹಿರೇಮಠ ಮತ್ತು ಮಹಾನಂದಾ ದಿಗ್ಗಾಂವಕರ್, ಕಲಾವತಿ ಶಿವಾನಂದನ್ ಇತರರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಮದನ್ ಮೋಹನ್‌ರವರು ಗ್ರಂಥದ ಮುನ್ನುಡಿ ಬರೆದಿದ್ದು, ಷಡಾಕ್ಷರಿಸ್ವಾಮಿ ದಿಗ್ಗಾಂವಕರ್ ಟ್ರಸ್ಟ್ ವತಿಯಿಂದ ಈ ಕೃತಿ ಪ್ರಕಟಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here