ಸುರಪುರ: ನಗರದ ಬಸ್ ಡಿಪೋ ಬಳಿಯ ಶರಣ ಸೇವಾ ಸಂಸ್ಥೆ ಕಛೇರಿಯ ಆವರಣದಲ್ಲಿ ಯಾದಗಿರಿ ಜಿಲ್ಲೆಯ ಕನ್ನಡ ಜಾಗೃತ ಜಿಲ್ಲಾ ಸಮಿತಿ ಸದಸ್ಯರಾಗಿ ಸರಕಾರದಿಂದ ನಾಮ ನಿರ್ದೇಶನಗೊಂಡಿರುವ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷರು ಪ್ರಕಾಶ ಅಂಗಡಿ ಕನ್ನೆಳ್ಳಿ ಮತ್ತು ಕಲಬುರಗಿ ಎ.ಬಿ.ವಿ.ಪಿ ಪ್ರಮುಖರಾದ ಅನೀಲ್ ಪಾಟೀಲ್, ಶ್ರೀ ಶರಣ ಸೇವಾ ಸಂಸ್ಥೆ, ಕಾಯಕ ಶಿಕ್ಷಣ ಹಾಗೂ ಗ್ರಾಮಿಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಪ್ರಕಾಶ ಅಂಗಡಿ ಕನ್ನೆಳ್ಳಿ ಅವರು ಈ ಸನ್ಮಾನದಿಂದ ನಮಗೆ ಇನ್ನಷ್ಟು ಜವಬ್ದಾರಿ ಹೆಚ್ಚಿಸಿದಂತಾಗಿದೆ ಎಂದು ಹೆಳಿದರು. ಸಮಾಜದಲ್ಲಿ ಯುವಕರು ಸಾಂಸ್ಕೃತಿಕ ಮತ್ತು ಕನ್ನಡ ಜಾಗೃತಿಗಾಗಿ ಮುಂದೆ ಬರಬೆಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಿವರಾಜ ಕಲಿಕೇರಿ ಅವರು ನಮ್ಮ ಭಾಗಕ್ಕೆ ಕನ್ನಡ ಮತ್ತು ವಿದ್ಯಾರ್ಥಿ ಘಟಕಕ್ಕೆ ಜವಬ್ದಾರಿಯನ್ನು ಪ್ರಕಾಶ ಅಂಗಡಿ ಕನ್ನಳ್ಳಿ ಅವರಿಗೆ ಮತ್ತು ಅನೀಲ್ ಪಾಟೀಲ್ ಅವರಿಗೆ ಎರಡು ಪ್ರಮುಖ ಸಂಘಟನೆಯಲ್ಲಿ ಉನ್ನತ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ, ಎರಡು ಸಂಘಟನೆಯಲ್ಲಿ ತಮ್ಮ ಕಾರ್ಯ ವೈಕರಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲು ಕೂಡ ನಮ್ಮ ಜಿಲ್ಲೆಗೆ ಇನ್ನಷ್ಟು ಕಿರ್ತಿ ತರುವಂತಹ ಕೆಲಸ ಆಗಲಿ ನಿಮ್ಮೊಂದಿಗೆ ನಮ್ಮಎಲರ ಸಹಕಾರ ಇರುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಯಕ ಗ್ರಾಮಿಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗಭುಷಣ ಯಾಳಗಿ, ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಹೇಷ ಗೌಡ ಸುಭೇದಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಸುಭೆದಾರ, ಸೈಯದ್ ಪಟೇಲ್, ರೇವಪ್ಪ ಪಾಟೀಲ್, ರಾಹುಲ್ ಕಲಬುರಗಿ, ರವಿ ತಿಮ್ಮಾಪೂರ ಇತರರಿದ್ದರು.