ಸುರಪುರ: ನಗರಕ್ಕೆ ಬರುವ ರಾಜ್ಯದ ಬೇರೆ ಬೇರೆ ಬಸ್ ಡಿಪೋದ ಬಸ್‌ಗಳು ನಗರದ ಬಸ್ ನಿಲ್ದಾಣದೊಳಗೆ ಬರದೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಮೂಲಕ ಹೊರಗಿನಿಂದಲೆ ಹೋಗುತ್ತವೆ,ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಕಾರ್ಮಿಕ ಮುಖಂಡ ದೇವಿಂದ್ರಪ್ಪ ಪತ್ತಾರ ಬೇಸರ ವ್ಯಕ್ತಪಡಿಸಿದರು.
ನಗರದ ಬಸ್ ಡಿಪೋ ಮುಂದೆ ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಸುರಪುರ ಬಸ್ ನಿಲ್ದಾಣದಲ್ಲಿ ಸಂಜೆಯಾದರೆ ರಾಜ್ಯದ ಬೇರೆ ಬೇರೆ ಬಸ್ ಡಿಪೋದ ಬಸ್‌ಗಳು ಬಸ್ ನಿಲ್ದಾಣದೊಳಗೆ ಬರುವುದಿಲ್ಲ,ಜನರು ಬಸ್‌ಗಾಗಿ ಕಾದು ಕಾದು ಬೇಜಾರು ಪಟ್ಟುಕೊಳ್ಳುತ್ತಾರೆ.ಕೆಲವು ಕಡೆಗೆ ಹೋಗಲು ಒಂದೊಂದೆ ಬಸ್ ಇರುವ ಕಡೆಗೆ ಹೋಗಲು ಜನರು ತುಂಬಾ ತೊಂದರೆ ಪಡುವಂತಾಗುತ್ತಿದೆ.ಆದ್ದರಿಂದ ಯಾವುದೇ ಬಸ್ ಡಿಪೋದ ಬಸ್ ನಗರಕ್ಕೆ ಬಂದರೆ ಕಡ್ಡಾಯವಾಗಿ ಬಸ್ ನಿಲ್ದಾಣದೊಳಗೆ ಬಂದು ಹೋಗುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು,ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದರು.
ನಂತರ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಘಟಕ ವ್ಯವಸ್ಥಾಪಕರು ಮಾತನಾಡಿ,ತಮ್ಮ ಬೇಡಿಕೆ ನ್ಯಾಯಯುತವಾಗಿದೆ.ಈ ಮುಂದೆ ಯಾವುದೇ ಬಸ್ ಬಂದರು ಕಡ್ಡಾಯವಾಗಿ ನಿಲ್ದಾಣದೊಳಗೆ ಹೋಗಿ ಬರುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ ರೌಫ್ ಮಹ್ಮದ ಮೌಲಾ ಸೌದಾಗರ್ ಅಬೀದ್ ಹುಸೇನ ಪಗಡಿ ದಾವೂದ್ ಇಬ್ರಾಹಿಂ ಪಠಾಣ್ ಮುಬಿನ್ ದಖನಿ ರಾಜಾ ಚನ್ನಪ್ಪ ನಾಯಕ ಎಂ ಪಟೇಲ್ ಖಾಜಾ ಅಜ್ಮೀರ್ ಸೇರಿದಂತೆ ಅನೇಕರಿದ್ದರು.