ಕರ್ನಾಟಕ ಬಂದ್ ಅಂಗವಾಗಿ ಕರವೇ ವತಿಯಿಂದ ಸುರಪುರದಲ್ಲಿ ಪ್ರತಿಭಟನೆ

0
28

ಸುರಪುರ: ಮರಾಠ ಅಭಿವೃಧ್ಧಿ ನಿಗಮ ರಚನೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಅಂಗವಾಗಿ ಸುರಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಹೋರಾಟಗಾರರು ಸರಕಾರದ ನಡೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು,ನಂತರ ತಹಸೀಲ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಸರಕಾರ ಮತ್ತು ಕನ್ನಡ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವೇದಿಕೆ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ,ಸರಕಾರ ಮರಾಠಿ ಹೆಸರಿನಲ್ಲಿ ಅಭಿವೃಧ್ಧಿ ನಿಗಮ ಮಾಡುವ ಮೂಲಕ ಕನ್ನಡಿಗರಿಗೆ ಅವಮಾನಿಸುವ ಕೆಲಸ ಮಾಡುತ್ತಿದೆ.ನಮ್ಮ ಹೋರಾಟ ಎಮ್.ಇ.ಎಸ್ ನಾಡದ್ರೋಹಿ ಗೂಂಡಾಗಳ ವಿರುಧ್ಧವಾಗಿದೆ,ನಾಡಿನಲ್ಲಿ ಸಾವಿರಾರು ಜನ ಮರಾಠ ಸಮುದಾಯದ ಹೋರಾಟಗಾರರು ನಮ್ಮ ಸಂಘಟನೆಗಳಲ್ಲಿದ್ದಾರೆ,ಅವರೆಲ್ಲರು ಕನ್ನಡಿಗರಾಗಿದ್ದಾರೆ,ಆದರೆ ಕನ್ನಡವನ್ನು ವಿರೋಧಿಸುವ ಎಮ್‌ಇಎಸ್ ದ್ರೋಹಿಗಳಿಗೆ ಸರಕಾರ ತನ್ನ ಸ್ವಾರ್ಥ ಓಟಿಗಾಗಿ ಇಂತಹ ಕೆಲಸಕ್ಕೆ ಮುಂದಾಗಿರುವುದು ಖಂಡನಿಯ ಎಂದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒಬ್ಬ ಕನ್ನಡ ದ್ರೋಹಿಯಾಗಿ ಕನ್ನಡ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಅಲ್ಲದೆ ಮುಖ್ಯಮಂತ್ರಿಗಳು ಇಂತಹ ಅವಿವೇಕಿ ಶಾಸಕನ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಾವೇ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ನಾಗರಾಜ ಕಲಬುರ್ಗಿ ರಾಘವೇಂದ್ರ ಕುಲಕರ್ಣಿ ತಾಲೂಕು ಉಪಾಧ್ಯಕ್ಷ ಶಿವಮೋನಯ್ಯ ಎಲ್.ಡಿ.ನಾಯಕ,ಪ್ರಧಾನ ಕಾರ್ಯದರ್ಶಿ ಅಂಬ್ಲಯ್ಯ ಬೇಟೆಗಾರ ಶ್ರೀನಿವಾಸ ನಾಯಕ ಆನಂದ ಮಾಚಗುಂಡಾಳ ಶ್ರೀನಿವಾಸ ನಾಯಕ ಲಕ್ಷ್ಮೀಪುರ ಅನಿಲ್ ಬಿರಾದಾರ ನಿಂಗಪ್ಪ ನಾಯಕ ವಿರೇಶ ರುಮಾಲ ಭೀಮರಾಯ ಬಾದ್ಯಾಪುರ ಮಲ್ಲಿಕಾರ್ಜುನ ಬೈರಿಮಡ್ಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here