ಕಲಬುರಗಿ: ತೆರಿಗೆ ವಂಚನೆ ಹಿನ್ನೆಲೆ ಚೆಟ್ಟಿನಾಡು ಸಂಸ್ಥೆಯ ದೇಶಾದ್ಯಂತ ಇರುವ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಚಿಂಚೋಳಿ ತಾಲೂಕಿನ ಚೆಟ್ಟಿನಾಡು ಸಿಮೆಂಟ್ ಕಾರ್ಖಾನೆ ವಾಣಿಜ್ಯ ವ್ಯವಹಾರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಚೆನ್ನೈ ಸೇರಿ ಹಲವು ರಾಜ್ಯಗಳಲ್ಲಿರುವ ಶಾಖೆಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇಂದು ನಸುಕಿನ ಜಾವ ಐದು ಗಂಟೆಯಿಂದ ದಾಳಿ ಆರಂಭಿಸಿದ ಅಧಿಕಾರಿಗಳು, ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.