ಗ್ರಾಪಂ ಚುನಾವಣೆ ಹಿನ್ನೆಲೆ: ಠಾಣೆಯಲ್ಲಿ ರೌಡಿಶೀಟರಗಳ ಪರೇಡ್

0
80

ಚಿಂಚೋಳಿ: ತಾಲೂಕಿನ ಗ್ರಾಮ ಪಂಚಾಯತ ಚುನಾವಣೆ ಘೋಷಣೆ ಯಾಗಿರುವ ಹಿನ್ನಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಮತ್ತು ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೌಡಿಶೀಟರಗಳನ್ನು ಠಾಣೆಗೆ ಕರೆಸಿ ಪೇರೆಡ್ ಮಾಡಿಸಲಾಯಿತು.

ರೌಡಿಶೀಟರಗಳಿಗೆ ಖಡಕ್ ವಾನಿರ್ಂಗ್ ನೀಡಿದ ಡಿವೈಎಸ್ಪಿವೀರಭದ್ರಯ್ಯ ಅವರು, ಯಾವುದೇ ಅಹಿತಕರ ಘಟನೆಗೆ ಆಸ್ಪದನೀಡುವುದಿಲ್ಲ ಶಾಂತಿಗೆ ಬಂಗತರುವುದಿಲ್ಲ ಎಂದು ಛಾಪಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದು ತಹಶೀಲ್ದಾರ್ ಕಛೇರಿಯಲ್ಲಿ ಒಪ್ಪಿಸುವಂತೆ ಸೂಚಿಸಿದರು.
ಒಂದು ವೇಳೆ ಏನಾದರು ಘಟನೆ ಜರುಗಿದರೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಚಿಂಚೋಳಿ ಠಾಣೆಗೆ ಒಳಪಡುವ ಸ್ಟೇಷನ್ ಗಳು ಮಿರಿಯಾಣ, ಕುಚಾಂವರ, ಸುಲೇಪೇಟ, ಚಿಮ್ಮಾನಚೋಡ,ರಟಕಲ್, ಎಲ್ಲಾ ಠಾಣೆಯಲ್ಲಿ ಬರುವ ರೌಡಿಶೀಟರಗಳನ್ನು ಕರೆಸಿ ಇದೆತಿಂಗಳು ನಡೆಯುವ ಸಾರ್ವತ್ರಿಕ ಚುನಾವಣೆ 22, 27,ರಲ್ಲಿ ತಾವು ಯಾವುದೇ ಮತದಾರರ ಮೇಲೆ ಒತ್ತಡ ಹಾಕಬಾರದು ಮತ ಇವರಿಗೆ ಚಲಾಯಿಸಿ ಅವರಿಗೆ ಚಲಾಯಿಸಿ ಎಂದು ಹಾಗೂ ತಮ್ಮ ಬುದ್ದಿಯಿಂದ ನೀವು ಒಳ್ಳೆಯ ಸನ್ನಡತೆಯಿಂದ ನಡೆಯಬೇಕು ಯಾವುದೇ ಗಲಾಟೆಯಲ್ಲಿ ಭಾಗವಹಿಸಬಾರದು ಶಾಂತಿಯಿಂದ ಇರಬೇಕು ತಾವು ಏನಾದರು ಗಲಾಟೆ ಮಾಡುವುದು ನಮ್ಮ ಗಮನಕ್ಕೆ ಬಂದರೆ ನಿಮ್ಮಗೆ ಬೀಡುವುದಿಲಾ ಎಂದು ಡಿವೈಎಸ್ಪಿ ಹೇಳಿದರು.

ತಾಲೂಕಿನ ರೌಡಿಶೀಟರಗಳು ಚಿಂಚೋಳಿ ಠಾಣೆಯಲ್ಲಿ 55, ಮಿರಿಯಾಣ 20,ಕುಚಾಂವರಂ 20, ಸುಲೇಪೇಟ 20,ರಟಕಲ್ 25, ರೌಡಿಶೀಟರಗಳು ಇವರಲ್ಲಿ 6ಜನ ವಯಾವೃದರು ಇದ್ದಾರೆ ಇವರ ಚಟುವಟಿಕೆಗಳನ್ನು ಪರೀಶೀಲಿಸಿ ಕೈ ಬೀಡಲಾಗುವುದು.

ಸೇಡಂ ಮತ್ತು ಚಿಂಚೋಳಿಯಲ್ಲಿ ಬರುವ ಬಂದುಕು ಪಿಸ್ತೂಲ್ ಪರವಾನಿಗೆ ಪಡೆದಿದ್ದ ಎಲ್ಲಾ ಬಂದುಕುಗಳು ಠಾಣೆಗೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ಈ ಎಸ್ ವೀರಭದ್ರಯ್ಯ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ ದಂಡಾಧೀಕಾರಿಗಳಾದ ಅರುಣಕುಮಾರ ಕುಲಕರ್ಣಿ, ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ್, ಸುಲೇಪೇಟ ಸಿಪಿಐ ವಿಜಯ ಮಹಾಂತೇಶ ಮಠಪತಿ, ಚಿಂಚೋಳಿ ಪಿಎಸ್‍ಐ ರಾಜಶೇಖರ ರಾಠೋಡ, ಮಿರಿಯಾಣ ಪಿಎಸ್‍ಐ ಸಂತೋಷ ರಾಠೋಡ, ಸುಲೇಪೇಟ ಪಿಎಸ್‍ಐ ಚೇತನ್ ಚೀದರಿ,ಕುಚಾಂವರಂ ಪಿಎ ಕುಪೇಂದ್ರ,ರಟಕಲ್ ಪಿಎಸ್‍ಐ ಶಿವಶಂಕರ ಕೆ.ಸುಬೇದಾರ. ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here