ಆಳಂದ: ಡಿ.22 ರಂದು ನಡೆಯಲಿರುವ ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಗೆ ಸ್ಫರ್ಧೆ ಬಯಸಿ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ, ವಾಪಸು ಹಾಗೂ ತಿರಸ್ಕೃತ ಮತ್ತು ಕ್ರಮ ಬದ್ಧ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡು ಇನ್ನೇನು ನೇರವಾಗಿ ೫೬೦ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಒಟ್ಟು ಚುನಾವಣೆ ನಡೆಯಬೇಕಿರುವ ೩೬ ಗ್ರಾಪಂಗಳಲ್ಲಿ ೬೦೦ ಸ್ಥಾನಗಳಿದ್ದು, ಈ ಪೈಕಿ ೧೯೭೩ ಮಂದಿ ನಾಮಪತ್ರ ಸಲ್ಲಿಸಿದ್ದರು, ಇದರಲ್ಲಿ ೮೮ ನಾಮಪತ್ರ ತಿರಸ್ಕೃತಗೊಂಡಿವೆ ಹಾಗೂ ೩೮೧ ಮಂದಿ ತಮ್ಮ ನಾಮಪತ್ರ ವಾಪಸು ಪಡೆದು ಕಣದಿಂದ ಹಿಂದಕ್ಕೆ ಸರಿದ ಹಿನ್ನೆಲೆಯಲ್ಲಿ ಮತ್ತು ೪೦ ಸ್ಥಾನಗಳಲ್ಲಿ ಸದಸ್ಯರ ಅವಿರೋಧ ಆಯ್ಕೆಯಾದ ಮೇಲೆ ಬಾಕಿ ಉಳಿದ ೫೬೦ ಸ್ಥಾನಗಳಿಗೆ ಮಾತ್ರ ನಡೆಯುವ ಚುನಾವಣೆಗೆ ೧೪೬೨ ಮಂದಿ ಕಣದಲ್ಲಿದ್ದಾರೆ ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ತಿಳಿಸಿದ್ದಾರೆ.
ಆಡಳಿತ ಹೈ ಅಲರ್ಟ್: ಯಶಸ್ವಿಯಾಗಿ ಗ್ರಾಪಂ ಚುನಾವಣೆ ನಡೆಸುವ ಛಲಹೊಂದಿರುವ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಕಾರ್ಯ ಚುಟುವಟಿಕೆಗಳಿಗೆ ಒತ್ತು ನೀಡಿ ಸಿಬ್ಬಂದಿಗಳಿಗೆ ಹೈ ಅಲರ್ಟಾಗುವುಂತೆ ಮಂಗಳವಾರ ಸೂಚಿಸಿದರು.
ಈ ಹಿನ್ನೆಲೆಯಲಿ ಕಚೇರಿಯ ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳು ಎಡಬಿಡೆದೆ ಕರ್ತವ್ಯದಲ್ಲಿ ತೊಡಗುವ ಮೂಲಕ ಗ್ರಾಪಂ ಚುನಾವಣೆ ಅಂತಿಮ ಹಂತದ ಎಲ್ಲ ಸಿದ್ಧತೆಗಳು ಮಾಡಿಕೊಕೊಳ್ಳತೊಡಗಿದ್ದಾರೆ. ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಶಿರಸ್ತೆದಾರ ಮನೋಜ ಲಾಡೆ ಅವರು, ಮತಗಟ್ಟೆ ಅಧಿಕಾರಿಗಳಿಗೆ, ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ್ತು ಪೊಲೀಂಗ್ ಏಜ್ಂಟರಿಗೆ ರವಾನೆ ಕೈಗೊಳ್ಳುವ ದಾಖಲೆಗಳನ್ನು ಆಯಾ ಗ್ರಾಪಂನಂತೆ ನೀಡುವ ಕೆಲಸವನ್ನು ಸಿಬ್ಬಂದಿಗಳ ಮೂಲಕ ಸಿದ್ಧಪಡಿಸುವ ಕಾರ್ಯವನ್ನು ಭರದಿಂದ ಕೈಗೋಳ್ಳಲಾಗಿತು.
ಶಿರಸ್ತೆದಾರ ರಾಕೇಶ ಶೀಲವಂತ, ಚುನಾವಣೆ ಕಾರ್ಯದ ಕಚೇರಿಯ ಪ್ರಮುಖ ಎಫಡಿಎ ವೀಣಾಶ್ರೀ, ಮಲ್ಲಿನಾಥ ಬೋಧನ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮಹಾದೇವ, ನಾಗವೇಣಿ, ರಂಜಿತಾ, ಸುಜಾತ ಪಾಟೀಲ, ಅನರಕಲಾ, ವಿಜಯಕುಮಾರ, ಸುನಿತಾ, ನಿಂಗಮ್ಮ, ಸ್ವಪ್ಮಾ ಮತ್ತಿತರ ಸಿಬ್ಬಂದಿಗಳು ಭರದಿಂದ ಕರ್ತವ್ಯದಲ್ಲಿ ಮತ್ತಿತರರು ತೊಡಗಿದ್ದಾರೆ.
ನಾಯಕರ ಪ್ರಚಾರ: ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತ್ತು ಮುಖಂಡರೊಂದಿಗೆ ಬಿರಿಸಿನ ಪ್ರಾಚಾರ ಕೈಗೊಂಡಿದ್ದು ಕಂಡುಬಂದಿದೆ.
ಮತ್ತೊಂದಡೆ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ತಮ್ಮ ಬೆಂಬಲಿಗರ ಪರ ಬ್ಯಾಟಿಂಗ್ ಆರಂಭಿಸಿ ಮತಬೇಟೆಗೆ ಜಾಲಬೀಸಿದ್ದು ದಿನ ಕಳೆದಂತೆ ಗ್ರಾಮೀಣ ಭಾಗದಲ್ಲಿ ತೀವ್ರ ಸ್ವರೂಪದ ಕಾವು ಪಡೆದುಕೊಂಡಿದೆ.