ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೃಷಿ ವಿರೋಧಿ ಮೂರು ಕಾಯ್ದೆಗಳನ್ನು ಮತ್ತು ಕರ್ನಾಟಕ ಜಾನುವಾರುಗಳ ವಧೆ ಪ್ರತಿಬಂಧಕ ಕಾಯ್ದೆಯನ್ನು ಕೈಬಿಡುವುದು ಸೇರಿದಂತೆ ರೈತಪರ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಹಲವು ಸಂಘಟನೆಗಳು ಕೈಗೊಂಡಿರುವ ರೈತರ ಹಕ್ಕೋತ್ತಾಯಗಳಿಗಾಗಿ ನಿರಂತರ ಧರಣಿಯಲ್ಲಿ 8ನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ಪ್ರೋಗ್ರೆಸ್ಸಿವ್ ಫಾರಂ ಸಂಘಟನೆ ಹೋರಾಟಕ್ಕೆ ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಈ ಧರಣಿಯಲ್ಲಿ ಜಮಿಯತ್ ಅಲ್ ಖುರೇಷಿ ಮೊಮಿನ್‌ಪುರ ಕಾರ್ಯದರ್ಶಿ ಅಬ್ದುಲ್ ರಶೀದ್ ಪಲ್ಲಮ್ ಸಾಬ್, ಕಿರಾನಾ ಮಚೆಂಟ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸೈಯದ್ ಮಂಜೂರ್ ಉಲ್‌ಹಸನ್ ಸಾಬ್, ಕಾಜಿಮ್ ಬೇಗ್, ಅಲ್ತಾಫ್ ಇನಾಂದಾರ ಇದ್ದರು.