ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ಶೆಡ್ ನಿರ್ಮಾಣ-ಮತ್ತಿಮಡು

0
173

ಶಹಾಬಾದ:ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಶನಿವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಭೂಮಿ ಪೂಜೆ ನೇರವೇರಿಸಿದರು.

ನಂತರ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಈಗಾಗಲೇ ವೀರಶೈವ-ಲಿಂಗಾಯತ ಸಮಾಜದ ಮುಖಂಡರು ರುದ್ರಭೂಮಿಯ ಅಭಿವೃದ್ಧಿಗೋಸ್ಕರ ಮನವಿ ಸಲ್ಲಿಸಿದ್ದರು.ಅದಕ್ಕಾಗಿ ಎಸ್ಎಫಸಿ ಶಾಸಕರ ವಿಶೇಷ ಅನುದಾನದಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತಿದೆ.ಅಲ್ಲದೇ ಹಳೆಶಹಾಬಾದ ವೀರಶೈವ-ಲಿಂಗಾಯತ ರುದ್ರಭೂಮಿಯಲ್ಲೂ ಶೆಡ್ ನಿರ್ಮಾಣ ಹಾಗೂ ಮಾರವಾಡಿ ಸಮಾಜದ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತಿದೆ.ಇದರಿಂದ ಸಮಾಜದ ಜನರಿಗೆ ಅನುಕೂಲವಾಗುತ್ತದೆ.ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದರು.

Contact Your\'s Advertisement; 9902492681

ಅಲ್ಲದೇ ಸಮಾಜದ ಜನರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ನಿಗದಿಪಡಿಸಲಾದ 15 ಲಕ್ಷ ರೂ.ನಿಗದಿಪಡಿಸಲಾಗಿತ್ತು.ಆ ಹಣ ಸಾಕಾಗುವುದಿಲ್ಲ ಎಂಬ ವಿಷಯ ತಿಳಿದು ಹೆಚ್ಚುವರಿಯಾಗಿ 20 ಲಕ್ಷ ರೂ. ಅನುದಾನ ನಿಗದಿಪಡಿಸಿ, ಒಟ್ಟು 35 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷ ಸಲೀಮಾಬೇಗಂ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಇಇ ಪುರುಷೋತ್ತಮ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ನಿರಂಜನ್ ಗೊಳೇದ್, ಅಣವೀರ ಇಂಗಿನಶೆಟ್ಟಿ, ಡಾ.ರಶೀದ್ ಮರ್ಚಂಟ್, ಸಾಹೇಬಗೌಡ ಬೋಗುಂಡಿ, ಗಿರೀಶ ಕಂಬಾನೂರ,ಅಣ್ಣಪ್ಪ ದಸ್ತಾಪೂರ, ಮೃತ್ಯುಂಜಯ್ ಹಿರೇಮಠ,ಸೂರ್ಯಕಾಂತ ಕೋಬಾಳ, ಬಸವರಾಜ ಮದ್ರಕಿ, ಸದಾನಂದ ಕುಂಬಾರ, ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ,ಶರಣು ವಸ್ತ್ರದ್, ಶಿವುಗೌಡ,ಮಲ್ಲಿಕಾರ್ಜುನ ವಾಲಿ,ನಾಗರಾಜ ಕರಣಿಕ್,ಶರಬು ಪಟ್ಟೇದಾರ, ಭಾಗಿರಥಿ ಗುನ್ನಾಪೂರ,ಜಯಶ್ರೀ ಸೂಡಿ, ಶಶಿಕಲಾ ಸಜ್ಜನ್, ಡಾ.ಅಹ್ಮದ್ ಪಟೇಲ್, ಹಾಷಮ ಖಾನ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here