ಗೋವು ಹತ್ಯೆ ನಿಷೇಧ ಕಾಯ್ದೆ ವಿರುದ್ಧ ಎಲ್ಲರೂ ಒಗ್ಗೂಡಿ: ಡಾ. ಅಜಗರ್ ಚುಲಬುಲ್

0
110

ಕಲಬುರಗಿ: ರಾಜ್ಯ ಸರಕಾರ ಜಾರಿಗೆ ತರಲು ಹೋರಟ್ಟಿರುವ ಗೋವು ಹತ್ಯೆ ನಿಷೇಧ ಕಾಯ್ದೆ  ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ವಿರೋಧಿಸಬೇಕೆಂದು ಖುರೇಷಿ ಬ್ರದರ್ಸ್ ವತಿಯಿಂದ ಸಮುದಾಐದ ಸಭಾಗಂಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸದಸ್ಯರಾದ ಡಾ. ಮಹಮ್ಮದ್ ಅಜಗರ್ ಚುಲಬುಲ್ ಕರೆ ನೀಡಿದ್ದಾರೆ.

ಬಿಜೆಪಿಗೆ ವಿಧಾನ ಪರಿಷತ್ ನಲ್ಲಿ ಕಾಯ್ದೆ ಜಾರಿಗೆ ಬಹುಮತ ಇಲ್ಲ. ಆದರೆ ಬಿಜೆಪಿ ಇತರೆ ರಾಜಕೀಯ ಪಕ್ಷದ ಪರಿಷತ್  ಸದಸ್ಯರನ್ನು ಖರೀದಿಸುವ ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಈಗಾಗಲೇ ರಾಜ್ಯದಲ್ಲಿ ಗೋವು ರಕ್ಷಣೆಗೆಗಾಗಿ 150ಕ್ಕೂ ಹೆಚ್ಚು ಗೋವುಶಾಲೆಗಳಿದ್ದು, 75 ಸರಕಾರ ಅನುದಾನ ಪಡೆಯುತ್ತಿವೆ, ಆದರೆ ಈ ಅನುದಾನದಲ್ಲಿ ಸಾಕಷ್ಟು ಹಗರಣಗಳು ನಡೆಯುತ್ತಿದೆ. ಬಹುಸಂಖ್ಯಾತರ ಆಹಾರದ ವಿರುದ್ಧದ ನೀತಿಯಾಗಿ ಗೋವು ನಿಷೇಧ ಕಾಯ್ದೆ ಇದ್ದಾಗಿದೆ ಎಂದರು.

ಈ ವೇಳೆಯಲ್ಲಿ ನ್ಯಾಯವಾದಿ ಮಜಹರ್ ಹುಸೇನ್ ಮಾತನಾಡಿ ಗೋವು ಹತ್ಯೆ ನಿಷೇಧ ಕಾಯ್ದೆ ಕಾನೂನಿನ ವಿರುದ್ಧವಾಗಿದ್ದು, ಆಹಾರದ ಹಕ್ಕುನ ವಿರುದ್ದ ಕಾಯ್ದೆಯಾಗಿದೆ. ಕಾಯ್ದೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆಹೋಗುವುದಾಗಿ ತಿಳಿಸಿದರು.

ಜಜೆಡಿಎಸ್ ಮುಖಂಡರಾದ ನಾಸೀರ್ ಹುಸೇನ್ ಉಸ್ತಾದ ಮಾತನಾಡಿ, ಜೆಡಿಎಸ್ ಪಕ್ಷ ಈಗಾಗಲೇ ಕಾಯ್ದೆ ವಿರುದ್ಧ ತನ್ನ ನಿಲುವು ಸ್ಪಷ್ಟಪಡಿಸಿದ್ದು, ವಿಧಾನ ಪರಿಷತ್ ನಲ್ಲಿ ಕಾಯ್ದೆ ವಿರುದ್ಧ ನಿಲ್ಲುವ ಭರವಸೆ ನೀಡಿದೆ. ಒಂದು ವೇಳೆ ಕಾಯ್ದೆ ಜಾರಿಗೆ ತರುವಲ್ಲಿ ಯಶಸ್ವಿಯಾದರು ಸಹ ರಾಜ್ಯಭವನ ಸೇರಿದಂತೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದರು.

ನಂತರ ಮಾತನಾಡಿ ಕಾಂಗ್ರೆಸ್ ಮುಖಂಡರಾದ ಬಾಬಾ ಖಾನ್ ಮಾತನಾಡಿ, ರಾಜ್ಯ ಸರಕಾರ ದಲಿತರು ಮತ್ತು ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರನ್ನು ತುಳಿಯುವ ಪ್ರಯತ್ನದಲ್ಲಿ ತೊಡಗಿದೆ. ಆಹಾರ, ರಾಜಕೀಯ, ಶಿಕ್ಷಣ, ಉದ್ಯೋಗದಿಂದ ನಮ್ಮ ಸಮುದಾಯಕ್ಕೆ ಸಿಗದ ರೀತಿಯಲ್ಲಿ ಕುತಂತ್ರಗಳು ನಡೆಸುತ್ತಿದೆ. ಬಿಜೆಪಿಯ ಅವೈಜ್ಞಾನಿಕ ನಿಲುವು ದೇಶದ ಹಾಗೂ ರಾಜ್ಯದ ಜನರು ನೋಡುತ್ತಿದ್ದಾರೆ. ಒಂದು ದಿನ ಇಂತಹ ಕುತಂತ್ರಕ್ಕೆ ಪಾಠಕಲಿಸಲಿದೆ ಆಕ್ರೋಶ ವ್ಯಕ್ತಪಡಿಸಿದರು.

ಬಾಬಾ ನಜರ್ ಮೊಹಮ್ಮದ್ ಖಾನ್ ಹನೀಫ್ ಖೂರೆಶಿ, ನಶೀರ್ ಖೂರೆಶಿ, ರಶೀದ್ ಪಲ್ಲಂ, ಅಸ್ಲಂ ಖೂರೆಶಿ ಸೇರಿದಂತೆ ನೂರಾರು ಯುವಕರು ಸಭೆಯಲ್ಲಿ ಉಪಸ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here