ಸುರಪುರ: ಸಂಗೀತ ಎಂಬುದಕ್ಕೆ ಯಾವುದೇ ಧರ್ಮ ಭಾಷೆ ದೇಶದ ಹಂಗಿಲ್ಲ ಅದು ಪ್ರತಿಯೊಬ್ಬರ ಮನದ ಭಾಷೆಯಾಗಿದ್ದು,ಸಂಗೀತ ಮನುಷ್ಯನನ್ನು ಉಲ್ಲಾಸಗೊಳಿಸುತ್ತದೆ ಎಂದು ಸುರಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಚಂದ್ರಶೇಖರ ನಾರಾಯಣಪುರ ಮಾತನಾಡಿದರು.
ಸಗರನಾಡು ಕಲಾ ವೇದಿಕೆ ರುಕ್ಮಾಪುರ ವತಿಯಿಂದ ನಗರದ ಸೂಗುರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನಾದ-ಲಯ ೨೦೨೧ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಸಂಗೀತ ಎಂಬುದೊಂದು ಎಲ್ಲರನ್ನು ಮಂತ್ರ ಮುಗ್ಧರಾಗಿಸುವ ದೇವ ಭಾಷೆಯಾಗಿದೆ. ಇದನ್ನು ಯಾರೂ ಕಲಿಸದಿದ್ದರು ಪ್ರತಿಯೊಬ್ಬರು ಸಂಗೀತಕ್ಕೆ ತಲೆದೂಗುತ್ತಾರೆ,ಅಂತಹ ಸಂಗೀತ ಕಾರ್ಯಕ್ರಮ ಇಂದು ನಡೆಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಶಿಕುಮಾರ ಬೆಕನಾಳಮಠ ಮಾತನಾಡಿ,ಸಂಗೀತವು ವೇದಗಳ ಕಾಲದಿಂದಲೂ ಇದೆ ಕಾಲಾಂತರದಲ್ಲಿ ವಿವಿಧ ಆಕರಗಳನ್ನು ಹೊಂದಿದೆ,ಅವುಗಳಲ್ಲಿ ಶಾಸ್ತ್ರಿಯ ಸಂಗೀತ ಸುಗಮ ಸಂಗೀತ ಜನಪದ ಹೀಗೆ ಅನೇಕ ಪ್ರಕಾರಗಳಿವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಚಂದ್ರಹಾಸ ಮಿಠ್ಠಾ ಲಕ್ಷ್ಮೀಪುರ ಹಾಗು ಹಿರಿಯ ಕಲಾವಿದ ಪ್ರಾಣೇಶ ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು.
ವೇ.ಮೂ ಕೊಟ್ರಯ್ಯಸ್ವಾಮಿ ಬಳೂಂಡಗಿಮಠ ಸಾನಿಧ್ಯವಹಿಸಿದ್ದರು,ಸಿದ್ದಲಿಂಗಯ್ಯಸ್ವಾಮಿ ಕಡ್ಲೆಪ್ಪನವರ ಮಠ ಮೋಹನ ಮಾಳದಕರ್ ಅತಿಥಗಳಾಗಿ ವೇದಿಕೆ ಮೇಲಿದ್ದರು,ಸಗರನಾಡು ಕಲಾ ವೇದಿಕೆಯ ಅಧ್ಯಕ್ಷ ರಾಜಶೇಖರ ಗೆಜ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಶರಣಯ್ಯಸ್ವಾಮಿ ಬಳೂಂಡಗಿಮಠ ಸಿದ್ದಲಿಂಗಯ್ಯಸ್ವಾಮಿ ಗಣೇಶ ಬಡಿಗೇರ ಶರಣು ಮಾಲಗತ್ತಿ ವಿಜಯಲಕ್ಷ್ಮೀ ಯಾದವ್ ನರಸಿಂಹ ಬಂಡಿ ಶಂಕರ ಅಲ್ಲೂರ್ ಸುರೇಶ ಅಂಬುರೆ ರಮೇಶ ಕುಲಕರ್ಣಿ ಉಮೇಶ ಯಾದವ್ ಮಹಾಂತೇಶ ಶಹಾಪುರಕರ್ ವಿನೋದ ಬಳ್ಳೂಂಡಗಿಮಠ ಶಂಭು ಬಳೂಂಡಗಿಮಠ ಇದ್ದರು.ಶರಣಬಸಪ್ಪ ಯಳವಾರ ನಿರೂಪಿಸಿದರು,ದೇವು ಹೆಬ್ಬಾಳ ಸ್ವಾಗತಿಸಿದರು,ವಿನೋದ ಬಳೂಂಡಗಿಮಠ ವಂದಿಸಿದರು.