ಸುರಪುರ: ಇಲ್ಲಿನ ನಗರದ ರಂಗಂಪೇಟೆಯ ಹಿರಿಯ ಜೀವಿ ಪ್ರಲ್ಹಾದರಾವ ಕುಳಗೇರಿಯವರ ಕುರಿತಂತೆ ಗ್ರಂಥವನ್ನು ಹೊರತರಲು ಉದ್ದೇಶಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ೨೪ ಡಿಸೆಂಬರ ೨೦೨೦ ರಂದು ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಪ್ರಲ್ಹಾದರಾವ್ ಕುಳಗೇರಿಯವರ ಕುರಿತು ಕೃತಿ ಹೊರತರಲು ನಿರ್ಣಯಿಸಲಾಗಿದೆ.
ಆದ್ದರಿಂದ ಪ್ರಲ್ಹಾದರಾವ ಕುಳಗೇರಿಯವರ ಅಭಿಮಾನಿಗಳು ಕುಳಗೇರಿಯವರ ಬಗ್ಗೆ ಅನುಭವವನ್ನಾಧರಿಸಿದ ಲೇಖನವನ್ನು ಜನೆವರಿ ೧೫ರ ಒಳಗಾಗಿ ಕಳುಹಿಸುವಂತೆ ತಿಳಿಸಿದ್ದು, ಲೇಖನ ಕಳುಹಿಸಬೇಕಾದ ವಿಳಾಸ ಡಾ. ಸುಧೀರ ಕುಳಗೇರಿ, ಶ್ರೀಧಾಮ, ಮನೆ ನಂ.೧-೮೯೧/೭೫/೪,ಸಿದ್ದಾರೂಢ ಸ್ಕೂಲ್ ಹತ್ತಿರ,ಕರುಣೇಶ್ವರ ನಗರ,ಕಲಬುರ್ಗಿ-೫೮೫೧೦೨, ಈಮೇಲ್: sudhirp.kulageri@gmail.com ಮೋ- ೯೪೪೮೫೮೧೨೮೭ ಅಥವಾ ಶ್ರೀನಿವಾಸ ಜಾಲವಾದಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಮಹಾತ್ಮ ಗಾಂಧಿ ಚೌಕ ಹತ್ತಿರ ಸುರಪುರ-೫೮೫೨೨೪ ಈಮೇಲ್: shrinivasjalawadi@gmail.com ಮೋ: ೯೮೮೬೫೬೩೧೭೯ ಪ್ರಲ್ಹಾದರಾವ್ ಕುಳಗೇರಿಯವರೊಂದಿಗೆ ಯಾವುದೇ ಅನುಭವ ಬಿಟ್ಟು ಹೋಗದಂತೆ ವಿಸ್ತಾರವಾಗಿ ಬರೆಯಬಹುದು, ಪುಟಗಳ ಮಿತಿ ಇರುವುದಿಲ್ಲ ಹಾಗು ಅವರೊಂದಿಗಿನ ಭಾವಚಿತ್ರಗಳಿದ್ದಲ್ಲಿ ಅವುಗಳ ಪ್ರತಿಯೊಂದನ್ನು ಕಳುಹಿಸಬಹುದು ಎಂದು ತಿಳಿಸಿದ್ದಾರೆ.