ಕಲಬುರಗಿ: ನಗರದ ವಡ್ಡರಗಲ್ಲಿ ಬ್ರಹ್ಮಪೂರ ಬಡಾವಣೆಯಲ್ಲಿರುವ ಶ್ರೀ ಶಿವುದಾಸ ಮಹಾರಾಜ ಮಠದಲ್ಲಿ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ೨೦ ಲಕ್ಷ ವೆಚ್ಚದ ಬೋವಿ (ವಡ್ಡರ) ಸಮುದಾಯ ಭವನಕ್ಕೆ ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಿದರು.
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ತಿಪ್ಪಣ್ಣ ಒಡೇಯರಾಜ, ನಗರ ಅಧ್ಯಕ್ಷ ಭೀಮಾಶಂಕರ ಭಂಕೂರ, ಜಿಲ್ಲಾ ಪ್ರ.ಕಾರ್ಯದರ್ಶಿ ರಾಜಕುಮಾರ ಶಿಂಧೆ, ಅನೀಲ ಜಾಧವ, ಶ್ರೀಹರಿ ಜಾಧವ, ಅಣ್ಣಪ್ಪ ಸಳಂಕೆ, ಸಚೀನ ಒಡೇಯರಾಜ, ಕಾಶಿನಾಥ ಮೈದಂರ್ಗಿ, ವೆಂಕಟೇಶ ಜಾಧವ, ಸಿದ್ದಮ್ಮ ಎಂ, ಸುಲ್ಲಾಭಾಯಿ, ಹಾಗೂ ಬಡಾವಣೆಯ ಮಹಿಳೆಯರು ಮುಖಂಡರು ಇದ್ದರು.