ವಿವೇಕಾನಂದರ ಕನಸಿಗೆ ತಣ್ಣೀರು ಎರಚಿತೇ ಯುವ ಜನತೆ?

0
125

“ಏಳಿ..! ಎದ್ದೇಳಿ..!! ಗುರಿಮುಟ್ಟುವ ತನಕ ನಿಲ್ಲದಿರಿ” ಎಂದು ಯುವಮನಗಳನ್ನು ಬಡಿದೆಬ್ಬಿಸಿದ ವೀರ ಸನ್ಯಾಸಿ, ದೇಶದ ಸಂಸ್ಕೃತಿ ವಿಶ್ವದೆಡೆಗೆ ಎತ್ತಿಹಿಡಿದ ಅಪ್ರತಿಮ ದೇಶಭಕ್ತ, ಯುವಮನಗಳ ಕ್ರಾಂತಿಕಾರಿ ಚಿಂತಕ ಸ್ವಾಮಿ ವಿವೇಕಾನಂದರು ನಮ್ಮ ದೇಶದ ಹೆಮ್ಮೆಯ ಆದರ್ಶ ಎಂದರೆ ತಪ್ಪಾಗದು.

ಹೌದು, ೧೮ರ ದಶಕದಲ್ಲಿ ಭಾರತ ದೇಶದ ಹಿಂದೂ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವಲ್ಲಿ ಶ್ರಮಿಸಿದ ವ್ಯಕ್ತಿಗಳ ಸಾಲಿನಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರಾಗಿ ಕಾಣುತ್ತಾರೆ. ಇಂದಿನ ದಿನಗಳಲ್ಲಿ ಅವರ ಕುರಿತು ಅಧ್ಯಯನಿಸುವುದು ಬಹಳ ಸೂಕ್ತವೆಂದೆನಿಸುತ್ತಿದೆ. ಕಾರಣವೆನೆಂದರೆ ಯುವ ಸಮೂಹ ದಿನೇ ದಿನೇ ದಾರಿ ತಪ್ಪುತ್ತಿರುವ ಸನ್ನಿವೇಶಗಳು ಸಮಾಜದಲ್ಲಿ ತಲೆ ತಗ್ಗಿಸುವಂತಹ ಕಾರ್ಯ ಚಟುವಟಿಕೆಗಳು ಕಾಣುತ್ತಿದ್ದಲ್ಲದೇ ಪ್ರಚಲಿತವಾಗಿ ಮುಖಕ್ಕೆ ಹೊಡೆದಂತೆ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ ಚಿಂಚನೆಗಳು ಮರೆತುಬಿಟ್ಟಿದ್ದೇವೆ ಎಂಬ ಆಲೋಚನೆ ಕಾಡುತ್ತಿದೆ.
ಯುವಜನರು ದೇಶಕ್ಕೆ ಸಲ್ಲಿಸಬೇಕಾದ ಸೇವೆಯು ಭಾರತ ಮಾತೆ ಮೆಚ್ಚುವಂತಾಗಿರಬೇಕು, ಆದರೇ ಇಂದಿನ ದಿನಗಳಲ್ಲಿ ಯುವ ಮನಸ್ಕರು ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಅಪಹರಣ ಕೃತ್ಯಗಳು ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇ.ತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಜೀವನ ಕುರಿತಷ್ಟೇ ಅರಿತರೆ ಖಂಡಿತ ಯುವ ಸಮೂಹದ ಭಾವನೆಗಳು ಬದಲಾಗುತ್ತವೆ ಎಂಬ ಮುನ್ಸೂಚನೆ ಹೇಳುತ್ತಿದೆ.

Contact Your\'s Advertisement; 9902492681

ಇಂದು ಅವರ ಜನ್ಮದಿನ ಅವರಿಗೆ ನೆನಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಬಾಲ್ಯಜೀವನ ; ಸ್ವಾಮಿ ವಿವೇಕಾನಂದರು ಕ್ರಿ.ಶ.೧೮೬೩ ರ ಜನವರಿ ೧೨ ರಂದು ಕಲ್ಕತ್ತಾದಲ್ಲಿ ಜನಿಸಿದರು.ಇವರ ಮೊದಲ ಹೆಸರು ನರೇಂದ್ರ ದತ್ತ. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ.

ನರೇಂದ್ರನು ತುಂಟ ಹುಡುಗನಾಗಿದ್ದನು. ಭುವನೇಶ್ವರಿ ದೇವಿಗೆ ಅವನನ್ನು ಹತೋಟಿಯಲ್ಲಿ ಇಡುವುದಕ್ಕೆ ಕೆಲವು ವೇಳೆ ಕಷ್ಟವಾಗುತ್ತಿತ್ತು. ಹೀಗಾಗಿ ಅವನನ್ನು ಸುಮ್ಮನಿರಿಸುವ ಸಲುವಾಗಿ ’ಶಿವ ಶಿವ’ ಎಂದು ಹೇಳುತ್ತ ಅವನ ತಲೆಯ ಮೇಲೆ ನೀರನ್ನು ಸುರಿದರೆ ಅವನು ಶಾಂತವಾಗುತ್ತಿದ್ದನು. ಅವನನ್ನು ಶಾಂತವಾಗಿಸಲು ಇದೊಂದು ಮಾರ್ಗವಾಗಿತ್ತು. ರಾಮಾಯಣ,ಮಹಾಭಾರತ ಕಥೆಗಳ ಜೊತೆಗೆ ಹಲವು ವಿಷಯಗಳ ಕುರಿತು ತಾಯಿಯಿಂದ ತಿಳಿದುಕೊಂಡನು.

ಹೀಗೆ ಮುಂದೆ ಧ್ಯಾನ, ಸಂಗೀತವನ್ನು ಅಭ್ಯಾಸ ಮಾಡುವುದು ಉತ್ತಮ ರೂಢಿಮಾಡಿಕೊಂಡನು. ಆತನು ಹಾಡುಗಳನ್ನು ಉತ್ತಮವಾಗಿ ಹಾಡುತ್ತಿರುವುದರಿಂದ ಅನೇಕ ಸಂತೋಷಕೂಟಗಳಲ್ಲಿ ಅವನನ್ನು ಆಹ್ವಾನಿಸುತ್ತಿದ್ದರು. ಆ ವೇಳೆ ಸ್ನೇಹಿತರೊಂದಿಗೆ ಮತ್ತು ವಯಸ್ಸಾದವರೊಡನೆ ಗಂಭೀರವಾಗಿ ಚರ್ಚೆಯಲ್ಲಿ ತೊಡಗುತ್ತಿದ್ದನು.ಅದರಲ್ಲಿ ಅವನನ್ನು ಮೀರಿಸುವುದು ಬೇರೆಯವರಿಗೆ ಅಸಾಧ್ಯವಾಗಿತ್ತು. ನರೇಂದ್ರನಿಗೆ ಧರ್ಮದಲ್ಲಿ ಆಸಕ್ತಿ ಇತ್ತು. ಆದರೆ, ಹಿಂದೂ ಧರ್ಮದ ಭೋದನೆಗಳಲ್ಲಿ ಅವನು ವಿಶ್ವಾಸವನ್ನು ಕಳೆದುಕೊಂಡಿದ್ದನು. ಯಾವುದನ್ನು ನಂಬಬೇಕು ಎನ್ನುವುದು ಅವನಿಗೆ ಗೊತ್ತಾಗುತ್ತಿರಲಿಲ್ಲ.ಆದರೆ, ಅವನನ್ನು ಕಾಡುತ್ತಿದ್ದ ಪ್ರಶ್ನೆ ಎಂದರೆ ದೇವರಿರುವನೆ ಅಥವಾ ಇಲ್ಲವೆ; ಈ ಪ್ರಶ್ನೆಗೆ ಉತ್ತರ ಹುಡುಕಲು ಅನೇಕ ಧಾರ್ಮಿಕ ಮುಖಂಡರನ್ನು ಭೇಟಿಯಾದನು. ಆದರೆ ಯಾರೂ ಅವನ ಸಂದೇಹ ಪರಿಹರಿಸಲಿಲ್ಲ.

ನರೇಂದ್ರನನ್ನು ಉಪಾಧ್ಯಾಯ ಪ್ರೊ. ಹೆಸ್ಟಿಯವರು ಕೋಲ್ಕತ್ತಾದ ಹತ್ತಿರವಿರುವ ದಕ್ಷಿಣೇಶ್ವರ ಕಾಳಿ ದೇವಸ್ಥಾನದಲ್ಲಿ ಅರ್ಚಕರಾದ,ಹಿಂದೂ ಧರ್ಮದ ದೊಡ್ಡಸಂತರು ಶ್ರೀ ರಾಮಕೃಷ್ಣ ಪರಮಹಂಸ ಅವರನ್ನು ಭೇಟಿಯಾಗುವಂತೆ ಹೇಳಿದರು. ಆವಾಗಿನಿಂದ ನರೇಂದ್ರನು ಅವರಿಗೆ ಭೇಟಿಯಾಗುತ್ತ ಹೋದನು. ತನ್ನ ಸಂಶಯಗಳನೇಲ್ಲ ಪರಿಹರಿಸಿಕೊಂಡನು. ಹೀಗೆ ಬೆಳೆದ ಗುರುಶಿಷ್ಯರ ಜೋಡಿಯು ಪ್ರಸಿದ್ಧವಾಯಿತು. ಹೀಗೆ ನರೇಂದ್ರನ ಮೇಲೆ ಪರಮಹಂಸರು ಅಪಾರ ವಿಶ್ವಾಸ ಹೊಂದಿದ್ದರು. “ಇತರ ಭಕ್ತರು ನಕ್ಷತ್ರದಂತಿದ್ದರೆ, ನರೇಂದ್ರ ಸೂರ್ಯನಂತೆ” ಎಂದು ಅವರು ಹೇಳುವರು.

ವಿಶ್ವ ಪರ್ಯಟನೆ: ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು ೧೮೯೩ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ’ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ’ನ್ಯೂಯಾರ್ಕ್’ ಮತ್ತು ’ಲಂಡನ್’ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ೧೮೯೭ರಲ್ಲಿ ಮೇ ತಿಂಗಳಲ್ಲಿ ಸ್ಥಾಪಿಸಿದರು.

ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ; ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಯುವಕರಿಗೆ ಕರೆ ನೀಡಿದ್ದರು. ಇಂದು ವಿವೇಕವಾಣಿಯ ಒಂದಿಷ್ಟು ಅಂಶ ನಮ್ಮ ಯುವ ಪೀಳಿಗೆಯ ತಲೆ ಒಳಗೆ ಹೊಕ್ಕರೆ, ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ದಿನನಿತ್ಯ ನಾವೆಲ್ಲರೂ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

೧೯೮೫ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು “ರಾಷ್ಟ್ರೀಯ ಯುವ ದಿನ” ಎಂದು ಘೋಷಿಸಲಾಗಿದ್ದು, ಈಗಲೂ ಆಚರಣೆಯಲ್ಲಿದೆ ಎಂಬುದಷ್ಟೇ ಸಂತೋಷ. ಇಂದು ದೇಶದಾದ್ಯಂತ ಆಚರಣೆ ಜಾರಿಯಲ್ಲಿದ್ದು, ಶಾಲಾ, ಕಾಲೇಜು ಅಲ್ಲಲ್ಲಿ ಮೆರವಣಿಗೆ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಕೂಟದಲ್ಲಿ ವಾರದಾದ್ಯಂತ ಪಾಲ್ಗೊಂಡು ವಿವೇಕಾನಂದರರ ಸಂದೇಶ ಸಾರುವಲ್ಲಿ ತೊಡಗಿದ್ದಾರೆಂಬುದು ಖುಷಿ ಎನಿಸುತ್ತದೆ.

ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ಟ್ರ ಚೇತವನ್ನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು. ಹೀಗಾಗಿ ಅವರು ಇಂದಿಗೂ ಜೀವಂತವಾಗಿರುವುದನ್ನು ಕಾಣುತ್ತೇವೆ.

ಭಾರತದ ವೀರ ಸನ್ಯಾಸಿ, ಯುಗಪುರುಷ. ತತ್ವ ಸಂದೇಶಗಳ ಅಮರವಾಣಿ ಮೂಲಕ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿದ ಮಹಾಚೇತನ. ವಿವೇಕಾನಂದ ಅವರು ಜುಲೈ ೪, ೧೯೦೨ ರಂದು ರಾತ್ರಿ ಇಹಲೋಕ ತ್ಯಜಿಸಿದ್ದರು. ಆ ದಿನದಂದು ದೇಶಾದ್ಯಂತ ಅವರ ಸ್ಮೃತಿ ದಿನವನ್ನು ಆಚರಿಸಲಾಗುತ್ತಿದೆ. ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಚಿಂತನೆಗಳು ಪ್ರಾಪಂಚಿಕ ವರ್ತಮಾನದಲ್ಲಿ ನೆಲೆಯೂರಿಬಿಟ್ಟಿವೆ. ಭಾರತೀಯರಾದ ನಾವು ನಿತ್ಯ ಸ್ಮರಿಸಿ ನಮ್ಮ ಸಂಸ್ಕೃತಿ ಹಾಗೂ ದೇಶದ ಬದಲಾವಣೆಗೆ ಮುತುವರ್ಜಿಯಿಂದ ಕೈ ಜೋಡಿಸುವುದು ಅತ್ಯಗತ್ಯವಾಗಿದೆ.

– ದಸ್ತಗೀರ ಎನ್. ಯಳಸಂಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here