ಸ್ವಾಮಿ ವಿವೇಕಾನಂದರ ಕನಸಿನ ಭಾರತವನ್ನು ನಿರ್ಮಾಣ ಮಾಡೋಣ

0
79

ಏಳ್ಳಿ! ಏದ್ದೇಳ್ಳಿ ಎಂದು ಕಂಠ ಘೋಷಣೆಯ ಮೂಲಕ ಅಂದಕಾರ, ದಾಸ್ಯದಲ್ಲಿ ನಿದ್ರಿಸುತಿದ್ದ ಇಡಿ ಹಿಂದುಸ್ತಾನದ ಭಾರತೀಯರನ್ನು ಬಿಡಿದೆಬಸಿದ ವೀರ ಸನ್ಯಾಸಿ, ಯುಗಪುರುಷ, ಶಿರೋಮಣಿ, ವಿಶ್ವ ಪರಿಚತ ವ್ಯಕ್ತಿ, ಹಾಗೂ ವಿಶ್ವಕ್ಕೆ ಭಾರತದ ಹಿರಿಮೆ ಹಾಗೂ ಸಂಸ್ಕ್ರತಿ ಯನ್ನು ಸಾರಿ ಹೇಳಿ ಪರಿಚಯಿಸಿ ವಿಶ್ವವನ್ನೇ ಆಚ್ಚರಿಗೊಳಿಸಿ ಬೆಚ್ಚಿ ಬಿಳಿಸಿ ಭಾರತದತ್ತ ವಿಶ್ವದ ಗಮನ ಸಳೆದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಇಂದು ಇವರ ಜನ್ಮ ದಿನವಾದುದದ್ದರಿಂದ ಅವರನ್ನು ಅರಿಯುವ ಒಂದು ಸಣ್ಣ ಪ್ರಯತ್ನವನ್ನು ಮಾಡೋಣ. ಸ್ವಾಮಿ ವಿವೇಕಾನಂದರು ಜನವರಿ ೧೨ ೧೮೬೩ ರಂದು ಕಲ್ಕತ್ತಾ ದಲ್ಲಿ ಜನಸಿದರು ಇವರ ತಂದೆ ವಿಶ್ವನಾಥ್ ದತ್ತ್ ಇವರು ಸುಪ್ರಸಿದ್ಧ ವಕೀಲರಾಗಿದ್ದರು. ಇವರ ತಾಯಿ ಭುವನೇಶ್ವರಿ ದೇವಿ ಸದ್ಗುಣದ, ಸನ್ನಡೆತೆಯ ಗೃಹಣಿಯೂ ಹಾಗೂ ದೈಭಕ್ತೆಯೂ ಆಗಿದ್ದಳು.

ಈ ದಂಪತಿಗಳು ಸ್ವಾಮಿ ವಿವೇಕಾನಂದರಿಗೆ ತೊಟ್ಟಿಲ್ಲಲ್ಲಿ ಇಟ್ಟ ಹೆಸರು ನರೇಂದ್ರ ಎನ್ನವುದಾಗಿತ್ತು‌. ನರೇಂದ್ರ ರು ಬೆಳೆಯುವ ಸಿರಿಯು ಮೊಳೆಕೆಯಲ್ಲಿಯೇ ಎಂಬಂತೆ ಇವರು ಬಾಲ್ಯದಲ್ಲಿಯೇ ಅಪಾರವಾದ ಬುದ್ದಿವುಳ್ಳ, ಚಿಂತನಮಯ, ಚಿಂತನಾಶೀಲ ಹಾಗೂ ಮನೋವಿಗ್ರಹವುಳ್ಳ ವ್ಯಕ್ತಿಯಾಗಿದ್ದರು. ಜೊತೆಗೆ ಅಷ್ಟೇ ರೀತಿಯ ವಿಪರೀತವಾದ ತುಂಟುತನಕ್ಕೆ ಹೆಸರಾಗಿದ್ದರು.

Contact Your\'s Advertisement; 9902492681

ಆಸ್ತಿಗಾಗಿ ಅಣ್ಣನ ಮಗನನ್ನೆ ಕೊಂದ ಪಾಪಿ ಚಿಕ್ಕಪ್ಪ: ದೀವಳಗುಡ್ಡದಲ್ಲಿ ಘಟನೆ

ನರೇಂದ್ರ ರು ಬಾಲ್ಯದಲ್ಲಿಯೇ ಉದಾರವಾದ ಹಾಗೂ ಕರುಣಮಯ ದಾನಮಯವಾದ ಸದ್ಗುಣಗಳನ್ನು ಹೊಂದಿದ್ದರು. ಎಷ್ಟರ ಮಟ್ಟಿಗೆ ಎಂದರೆ ಒಂದು ದಿನ ಒಬ್ಬ ಸಾಧು ವ್ಯಕ್ತಿಯೂ ಚಳಿಯಿಂದ ನಡುಗಿತ್ತಿರುವುದನ್ನು ಕಂಡು ಆ ದೃಶ್ಯ ವನ್ನು ನೋಡಲಾಗದೆ ಕನಿಕರಪಟ್ಟು ಸ್ವಾಮಿ ವಿವೇಕಾನಂದರು ಸ್ವತಃ ತಾವು ಹೊದ್ದುಕೊಂಡಿದ್ದ ಶಾಲನೇ ಆ ಸಾಧುವಿಗೆ ದಾನ ಮಾಡಿದ್ದಾರು. ಈ ವಿವೇಕಾನಂದರು ವಿದ್ಯಾಭ್ಯಾಸ ದಲ್ಲಿಯೂ ತುಂಬಾ ಮುಂಚೂಣಿಯಲ್ಲಿದ್ದರು. ಇವರು ಹೊಂದಿರುವ ವಿವೇಕದಿಂದಲೆ ಇವರಿಗೆ ವಿವೇಕಾನಂದ ಎಂದು ಹೆಸರು ಬಂದಿದೆ.

ಇವರು ಕಾಲೇಜಿನ ದಿನಗಳಲ್ಲಿ ಅಧ್ಯಾಯನ ಮಾಡುವ ಸಮಯದಲ್ಲಿ ವಿವೇಕಾನಂದರು ಭಾಷಣ ಕಲೆಯಲ್ಲಿ ಕರಗತರಾಗಿದ್ದರು. ಅಪಾರವಾದ ದೇಶ ಮತ್ತು ವಿದೇಶಿ ಸಾಹಿತ್ಯಗಳನ್ನು, ಧರ್ಮಗ್ರಂಥಗಳನ್ನು, ಹಾಗೂ ತತ್ವಶಾಸ್ತ್ರ ಗಳನ್ನು ಅಳವಾಗಿ ಅಧ್ಯಾಯನ ಮಾಡಿದ್ದರು. ಹೀಗೆ ಎಲ್ಲವನ್ನು ಮೈಗೂಡಿಸಿಕೊಂಡು ವಿವೇಕಾನಂದರು ಕೇವಲ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ೧೮೮೪ ರಲ್ಲಿ ಬಿ‌.ಎ. ಪದವಿಯನ್ನು ಪಡೆದಿದ್ದರು. ಈ ಸಮಯದಲ್ಲಿಯೇ ಹಾಗೂ ಬಾಲ್ಯದಲ್ಲಿ ತಮ್ಮ ತಾಯಿಯಿಂದ ಅನೇಕ ನೀತಿ ಕಥೆಗಳನ್ನು, ರಾಮಾಯಣ, ಮಹಾಭಾರತದ ಕಥೆಗಳನ್ನು ತಿಳಿದುಕೊಂಡಿದ್ದ ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆಯತ್ತ ವಾಲಿದ್ದರು.

ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷ: ಇಬ್ಬರು ಗಂಭೀರ

ದೇವರ ಕಲ್ಪನೆ ಹಾಗೂ ಅಸ್ತಿತ್ವ ದ ಬಗ್ಗೆ ತಮ್ಮಗಿರುವ ಸಂಶಯವನ್ನು ಸರಿಪಡಿಸಿಕೊಳ್ಳಲು ಅನೇಕ ಸಾಧು ಸಂತರೊಂದಿಗೆ ಚೆರ್ಚಿಸಿದ್ದರು. ಕೊನೆಗೆ ಅದರಿಂದ ತೃಪ್ತಿಗೊಳದ ವಿವೇಕಾನಂದರು ಅಂದು ಅಧ್ಯಾತ್ಮಿಕತೆಯಲ್ಲಿ ಪ್ರಖ್ಯಾತಿ ಯನ್ನು ಹೊಂದಿದ್ದ ರಾಮಕೃಷ್ಣ ಪರಮಹಂಸ ರ ಬಗ್ಗೆ ತಿಳಿದುಕೊಂಡು ಅವರನ್ನು ಭೇಟಿಯಾಗಿ ದೇವರ ಕಲ್ಪನೆ, ರೂಪ, ಅಸ್ತಿತ್ವದ ಬಗ್ಗೆ ಸುದೀರ್ಘ ವಾಗಿ ಚಿರ್ಚಿಸಿ. ಆನಂತರ ವಿವೇಕಾನಂದ ರು ಇವರ ಶಿಷ್ಯತ್ವವನ್ನು ಸ್ವಿಕರಿಸಿ ಅವರ ಪರಮ ಹಾಗೂ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು.

ಮುಂದುವರಿದು ಸನ್ಯಾಸತ್ವವನ್ನು ಸ್ವಿಕರಿಸಿ  ಸನ್ಯಾಸಿಯಾಗಿ ಪರಿವರ್ತನೆ ಯಾದರು. ಮುಂದೆ ರಾಮಕೃಷ್ಣ ಪರಮಹಂಸರ ಮರಣದ ನಂತರ ಅವರ ರಾಮಕೃಷ್ಣ ಮಿಷನ್ ನ ಉಸ್ತುವಾರಿ ಯನ್ನು ವಹಿಸಿಕೊಂಡ ಧರ್ಮ ಪ್ರಚಾರ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು. ಮುಂದೆ ಸ್ವಾಮಿ ವಿವೇಕಾನಂದರು ತಮ್ಮ ಪಾಂಡಿತ್ಯದ ಫಲವಾಗಿ ದೂರದ ಅಮೇರಿಕಾದ ಚಿಕಾಗೋ ದಲ್ಲಿ ನಡೆಯುವ ವಿಶ್ವ ಧರ್ಮದ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದರು. ಸೆಪ್ಟೆಂಬರ್ ೧೧, ೧೮೯೩ ರಲ್ಲಿ ಚಿಕಾಗೋ ದಲ್ಲಿ ನೆಡದ ವಿಶ್ವ ಸಮ್ಮೇಳನದಲ್ಲಿ ಸಾಧು, ಸಂತ, ಕಾವಿವೇಷಧಾರಿಯಾ ವಿವೇಕಾನಂದರು ಸಮ್ಮೇಳನದ ಕೊನೆಯಲ್ಲಿ ಮಾಡಿದ ಭಾಷಣವು ಇಡೀ ಅಲ್ಲಿನ ಸಭಿಕರನ್ನು ಸೆಳೆಯಿತು. ಅಲ್ಲದೇ ಮರು ದಿನ ಇಡೀ ಪ್ರಪಂಚವೇ ಭಾರತದತ್ತ ಗಮನಹರಿಸಿ ಕಣ್ಣಾಯಿಸುವಂತೆ ಮಾಡಿತು. ಆ ದಿನವು ಭಾರತೀಯರ ಪಾಲಿಗೆ ಶುಭದಿನ ಹಾಗೂ ಮರೆಯಲಾರದ ಸ್ಮರಣೆಯ ದಿನವಾಗಿದೆ.

ಈ ವಿವೇಕಾನಂದರ ಭಾಷಣದ ತರುವಾಯ ಭಾರತ ಹಾಗೂ ಹಿಂದೂ ಧರ್ಮವು ಇಡೀ ವಿಶ್ವ ಕ್ಕೆ ಮಾದರಿ ಮತ್ತು  ಗುರುವಾಯಿತ್ತು. ಹಿಂದೂ ಧರ್ಮದ ಸಂಸ್ಕೃತಿ, ಪಂರಂಪರೆಯೂ ಬಹು ಎತ್ತರ ಕ್ಕೆ ಬೆಳೆಯಿತು. ಮುಂದುವರಿದ ವಿವೇಕಾನಂದರು ತಮ್ಮ ಕಾರ್ಯಪ್ರವೃತಿಯನ್ನು ಕೇವಲ ಧರ್ಮ ಪ್ರಚಾರಕಷ್ಟೇ ಸಿಮಿತಗೊಳಿಸಿದೇ ಅಂದಿನ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಅಸಮಾನತೆ ಯ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದರು. ಸ್ವಾಮಿ ವಿವೇಕಾನಂದರು ಮುಂದುವರಿದು ಧರ್ಮ ಹಾಗೂ ದಾರಿದ್ರ್ಯ ವ್ಯವಸ್ಥೆ ಯ ಬಗ್ಗೆ ಹೀಗೆ ಹೇಳಿದ್ದಾರೆ‌. “ಹಸಿದವರಿಗೆ ಅನ್ನವನ್ನು ನೀಡದ ಹಾಗೂ ವಿಧವೆಯರ ಕಣ್ಣಿರನ್ನು ಒರೆಸದಿರುವ ಧರ್ಮದಲ್ಲಿ ನನ್ನಗೆ ನಂಬಿಕೆ ಇಲ್ಲಾ ಹಾಗೂ ಅದು ಧರ್ಮವೇ ಅಲ್ಲಾ”. ಎಂದು ಅಂದಿನ ಅಸಮಾನತೆ ಯ ವಿರುದ್ದ ಗುಡುಗಿದರು. ಅಂದಿನ ಕಾಲದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ‌ಸ್ವಾಮಿ ವಿವೇಕಾನಂದರು ಮಾಡಿದ್ದರೆ.

ಉತ್ತಮ ಶಿಕ್ಷಣ ಜೋತೆಗೆ ಸಂಸ್ಕಾರ ಅಗತ್ಯ : ವಿಶ್ವರಾಧ್ಯ ಶ್ರೀ

ಸ್ವಾಮಿ ವಿವೇಕಾನಂದ ಧರ್ಮವನ್ನು ಕುರಿತು ಹೀಗೆ ಹೇಳುತ್ತಾರೆ ಎಲ್ಲಾ ದೇವ ಮಂದಿಗಳಲ್ಲಿ ಚರ್ಚ್ ಗಳು, ಮಸೀದಿ ಮಂದಿರಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡಬೇಕು ಆ ಧಾರ್ಮಿಕ ಶಿಕ್ಷಣವು ಜಾತ್ಯಾತೀತ ವಾಗಿರಬೆಕೇಂದು ಸ್ವಾಮಿ ವಿವೇಕಾನಂದರ ವಿಚಾರಧಾರೆ ಯಾಗಿತ್ತು. ಯಾವುದೇ ಒಂದು ಮುಂದುವರಿದ ದೇಶವು ಆ ದೇಶದ ಸುಶಿಕ್ಷಿತ ಜನತೆಯ ಮೇಲೆ ಆ ದೇಶದ ಅಭ್ಯುದಯ ಹಾಗೂ ಅಭಿವೃದ್ಧಿ ಯೂ ನಿರ್ಧಾರವಾಗುತ್ತದೆ ಎಂದು ಶಿಕ್ಷಣದ ಬಗ್ಗೆ ವಿವೇಕಾನಂದರು ಹೇಳಿದ್ದಾರೆ. ಮುಂದುವರಿದು ಸ್ವಾಮಿಜೀಯವರು ಅಂದು ಬ್ರಿಟಿಷರ ವಿರುದ್ಧ ಸಿಡಿದೆದ್ದು. ಮಲಗಿದ್ದ ಭಾರತೀಯರನ್ನು ಎಚ್ಚರಿಸಿ ಭಾರತಾಂಭೇಯ ಮುಕ್ತಿಗಾಗಿ ಹೋರಾಡುವಂತೆ ಯುವಜನರನ್ನು ಪ್ರಚೋದಿಸಿದರು. ಸ್ವಾಮಿ ವಿವೇಕಾನಂದರು ಯುವಕರ ಮೇಲೆ ಹಾಗೂ ಯುವ ಶಕ್ತಿಯ ಮೇಲೆ ಅಪಾರ ವಾದ ನಂಬಿಕೆಯನ್ನು ಇಟ್ಟಿದ್ದರು. ಯುವಶಕ್ತಿಯಿಂದಲೇ ಭಾರತದ ಅಭಿವೃದ್ಧಿ, ಪ್ರಗತಿಯೂ ಸಾಧ್ಯ ಎಂಬುದನ್ನು ಅರಿತಿದ್ದರು. ಯುವಕರ ಕುರಿತು ಸ್ವಾಮಿಜೀ ನನ್ನ ಕೈಗೆ ಸದೃಢ ಮನಸ್ಸಿನ, ಉಕ್ಕಿನ ನರಮಂಡಲದ, ವಿದ್ಯುತ್‌ ಚಕ್ತಿಯ ಆಲೋಚನಾ ಶಕ್ತಿಯುಳ್ಳ ೧೦೦ ಯುವಕರನ್ನು ನನ್ನ ಕೈಗೆ ಕೊಡಿ ಭಾರತವನ್ನು ಬದಲಾಯಿಸುತ್ತೆನೆಂದು ವಿಶ್ವಾಸಿಕವಾಗಿ ವಿವೇಕಾನಂದರು ಹೇಳಿದ್ದರು.

ಇಂತಹ ಯುಗಪುರುಷ, ತ್ಯಾಗಮಹಿ, ವೀರ ಸನ್ಯಾಸಿ, ಮರೆಯಲಾಗದ ಮಾಣಿಕ್ಯ ತನ್ನ ಬದುಕಿನ ಉದ್ದಕ್ಕೂ ಭಾರತಾಂಬೇಗಾಗಿ ದುಡಿದ ಸ್ವಾಮಿ ವಿವೇಕಾನಂದರು ಕೇವಲ ತಮ್ಮ ೩೯ ನೆಯ ವಯಸ್ಸಿನಲ್ಲಿ ಆಗಾಧವಾದ ಹಾಗೂ ಅಸಾಧ್ಯ ವಾದ ಸಾಧನೆಯನ್ನು ಮಾಡಿದ ಈ ನಮ್ಮ ಇಹಲೋಕದ ಸಂಬಂಧವನ್ನು ತ್ಯಜಿಸುವ ಮೂಲಕ ನಮ್ಮಿಂದ ದೂರವಾಯಿತು.

ದಿಶಾರವಿ ಬಂಧನ ಖಂಡಿಸಿ ರಾಷ್ಟ್ರಪತಿಗೆ ಮನವಿ

ಹೀಗೆ ವಿವೇಕಾನಂದರು ಮಾತು, ಪ್ರವಚನ ಭಾಷಣಗಳು ಹಾಗೂ ಬರಹಳೆಲ್ಲವೂ ನಮ್ಮಗೆ ಆದರ್ಶಮಯ ಹಾಗೂ ಸ್ಪೂರ್ತಿದಾಯಕವಾಗಿವೆ. ಆದರೆ ಇಂದಿನ ಯುವಶಕ್ತಿಯೂ ಮಾತ್ರ ಸ್ವಾಮಿ ವಿವೇಕಾನಂದರನ್ನು ಅರಿಯದೇ ಅವರ ಹಾದಿಯಲ್ಲಿ ಸಾಗದೇ ಹಲವಾರು ರೀತಿಯ ದಾಸ್ಯಗಳಿಗೆ ಬಲಿಯಾಗುತಿರುವುದು ನಿಜಕ್ಕೂ ದುರಂತಮಯವಾದ ಸಂಗತಿಯಾಗಿದೆ. ಸರ್ವ ಧರ್ಮಗಳ ಸಮನ್ವಯತೆ ಗಾಗಿ ಶ್ರಮಿಸಿದ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತ ಮಾಡುವದು ಸರಿಯಲ್ಲ, ಈಗಲಾದರು ಈ ನಮ್ಮ ಯುವಶಕ್ತಿಯು ಎಚ್ಚೇತುಕೊಂಡು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಅರಿತು, ಅವರ ಹಾದಿಯಲ್ಲಿ ಸಾಗಿ ಸ್ವಾಮಿಜೀಯವರು ಬಯಸಿದ ಸೌಹಾರ್ದ, ಬಲಿಷ್ಠ ಮತ್ತು ಸುಭದ್ರ ಭಾರತದ ನಿರ್ಮಾಣಕ್ಕೆ ಕಂಕಣ ಬದ್ದರಾಗಿ ಎಂದು ಹೇಳುತ್ತಾ ಸರ್ವರಿಗೂ ಹಾಗೂ ನನ್ನ ಎಲ್ಲ ಓದು ಬಂಧುಗಳಿಗೆ ಸ್ವಾಮಿ ವಿವೇಕಾನಂದರ ಜನ್ಮ ದಿನದ ಶುಭಾಶಯಗಳು.


– ಶಿವಕುಮಾರ ಮ್ಯಾಗಳಮನಿ, ಕವಿತಾಳ SFI ರಾಜ್ಯ ಉಪಾಧ್ಯಕ್ಷರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here