ಸುರಪುರ: ನಗರದ ಬಡಿಗೇರ ಬಾವಿ ಬಳಿಯಲ್ಲಿ ನೂತನವಾಗಿ ಆರ್‌ಎಸ್‌ಎಸ್ ಶಾಖಾ ಕಚೇರಿಯನ್ನು ಆರಂಭಿಸಲಾಯಿತು.ಕಚೇರಿಯನ್ನು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ, ಶ್ರೀರಾಮ ಮಂದಿರ ಈ ದೇಶದ ಹೆಮ್ಮೆಯ ಪ್ರತೀಕವಾಗಿದೆ.ಅದನ್ನು ದೇಶದ ಎಲ್ಲಾ ಜನರು ಭಕ್ತಿ ಮತ್ತು ಅಭಿಮಾನದಿಂದ ನಿರ್ಮಿಸಲು ಕೈ ಜೋಡಿಸಬೇಕು ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನವನ್ನು ಈಗಾಗಲೆ ಹುಣಸಗಿ ಮತ್ತು ದೇವಾಪುರದಲ್ಲಿ ಸಭೆ ನಡೆಸಿ ಚಟುವಟಿಕೆ ಆರಂಭಿಸಲಾಗಿದ್ದು,ಅದರಂತೆ ಸುರಪುರದಲ್ಲಿಯೂ ಇದೇ ೧೬ನೇ ತಾರೀಖಿನಂದು ಬೃಹತ್ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಅಲ್ಲದೆ ಈ ಸಭೆಯಲ್ಲಿ ಎಲ್ಲಾ ಮುಖಂಡರು ಭಾಗವಹಿಸಿ ನಿಧಿ ಸಮರ್ಪಣಾ ಅಭಿಯಾನವನ್ನು ಯಶಸ್ಸುಗೊಳಿಸುವಂತೆ ತಿಳಿಸಿದರು.
ನಂತರ ಮುಖಂಡರಾದ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ,ಶ್ರೀರಾಮ ಮಂದಿರವನ್ನು ನಿರ್ಮಿಸುವುದು ಸುಮಾರು ಐದು ನೂರು ವರ್ಷಗಳ ಕನಸಾಗಿದೆ,ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗಾಗಲೆ ಚಾಲನೆ ನೀಡಿದ್ದಾರೆ.ಆದ್ದರಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇದೇ ೧೫ನೇ ತಾರೀಖಿನಿಂದ ಫೇಬ್ರವರಿ ೫ರ ವರೆಗೆ ಅಭಿಯಾನವನ್ನು ನಡೆಸಿ ನಿಧಿ ಸಂಗ್ರಹವನ್ನು ಮಾಡಲಾಗುವುದು,ಇದಕ್ಕೆ ಯಾವುದೇ ಪಕ್ಷ ಜಾತಿ ಧರ್ಮದ ಭೇದವಿಲ್ಲ ಎಲ್ಲರ ಮನೆಗಳಿಗು ಹೋಗಿ ನಿಧಿ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಅಲ್ಲದೆ ಶ್ರೀರಾಮನನ್ನು ತಮ್ಮ ರಾಮಾಯಣ ಕೃತಿಯ ಮೂಲಕ ಜಗತ್ತಿಗೆ ತಿಳಿಸಿದ ಶ್ರೀ ಮಹರ್ಷಿ ವಾಲ್ಮೀಕಿಯ ಮಂದಿರವನ್ನು ನಿರ್ಮಿಸುವ ಕುರಿತು ಸಂಘ ಪರಿವಾರ ಮುಂದಾಗಲಿದೆ ಮತ್ತು ನಮ್ಮ ಸುರಪುರ ನಗರದ ಶಿಬಾರಬಂಡಿಯಲ್ಲಿನ ಶ್ರೀರಾಮನ ಬಾಣವಿರುವ ಮಂದಿರ ಪ್ರವಾಸಿ ತಾಣವಾಗಿ ಅಭೀವೃಧ್ಧಿಗೊಳಿಸಲು ಮುಖಂಡರ ಗಮನ ಸೆಳೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಉಪಾಧ್ಯಕ್ಷ ಮಹೇಶ ಪಾಟೀಲ್ ಹಾಗು ಮುಖಂಡರಾದ ಹೆಚ್.ಸಿ.ಪಾಟೀಲ್ ಬಸನಗೌಡ ಹಳ್ಳಿಕೋಟಿ ಸಂಘ ಪರಿವಾರದ ನಾಗರಾಜ ಮಕಾಶಿ ಪರಶುರಾಮ ಬೈಲಕುಂಟಿ ಗುರುನಾಥ ರೆಡ್ಡಿ ಗಿರಿಧರ ಹೂಗಾರ ಹಣಮಂತ್ರಾಯ ಮಂಜಲಾಪುರ ಶಿವಲಿಂಗ ಶ್ರೀಕಾಂತ ಮೇದಾ ವಸೀಮ್ ಅಕ್ರಮ ಶಿವು ಕೊಂಗಂಡಿ ಸಿದ್ರಾಮ ಸೇರಿದಂತೆ ಅನೇಕರಿದ್ದರು.