ಶೋಭಯಾತ್ರೆಗೆ ಅನುಮತಿ ನೀಡದಂತೆ ಸಿಪಿಐಎಂ ಪ್ರತಿಭಟನೆ

0
49
ಶೋಭಯಾತ್ರೆಗೆ ಅನುಮತಿ ನೀಡದಂತೆ ಸಿಪಿಐಎಂ ಪ್ರತಿಭಟನೆ

ಕಲಬುರಗಿ: ಶ್ರೀರಾಮಸೇನೆ ಆಳಂದನಲ್ಲಿ ಹಮ್ಮಿಕೊಂಡಿರುವ ಶೋಭಾಯಾತ್ರೆಗೆ ಅನುಮತಿ ರದ್ದು ಪಡಿಸಿ ಮತ್ತು ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಆಕ್ರಮ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡೆ ದಿವ್ಯ ಹಾಗರಗಿ ಕೂಡಲೇ  ಬಂಧಿಸುವಂತೆ ಒತ್ತಾಯಿಸಿ ಗುರುವಾರ ಭಾರತ ಕಮ್ಯುನಿಷ್ಟ್ ಪಕ್ಷ (ಎಂ) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಾಟನಾ ಮೆರವಣಿಗೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯಾದರ್ಶಿಯಾಗಿರುವ ಕೆ ನೀಲಾ ಮಾತನಾಡಿ, ಸಾಮರಸ್ಯದ ತಾಣವಾಗಿರುವ ಆಳಂದ ಲಾಡ್ಲೆ  ಮಶಾಕ್ ದರ್ಗಾ ಕೋಮುವಾದಿಗಳು ಮಾರ್ಚ್ ನಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರು. ಇದಕ್ಕೆ ಬಿಜೆಪಿ ಸಂಸದರು, ಶಾಸಕರು ಸಾಥನ್ ನೀಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ.  ಇದರ ನಡುವೆ ಇದೇ 24 ರಂದು  ಶ್ರೀರಾಮಸೇನೆ ಆಳಂದನಲ್ಲಿ ಶೋಭಾಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕೆ ಅನುಮತಿ  ನಿರಾಕರಿಸಬೇಕೆಂದು ಕಲಬುರಗಿ ಎಸ್.ಪಿ ಕಚೇರಿ ಮುಂದೆ ಪ್ರತಿಭಟನೆ ಆಗ್ರಹಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ವಾಹನಕ್ಕೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಾಕರ್ತರ ಬಂಧನ

ನಗರದ ತೀಮ್ಮಾಪುರ ವೃತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕಲಬುರಗಿ ಎಸ್.ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಆಕ್ರಮದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಮುಖಂಡೆ ದಿವ್ಯ ಹಾಗರಗಿ ಅವರನ್ನು ಕೂಡಲೇ ಬಂಧಿಸಿ, ರಾಜ್ಯದಲ್ಲಿ ಇಂತಹ ಕೃತ್ಯಕ್ಕೆ ಸಾಥ್ ನೀಡುತ್ತಿರುವ ಗೃಹ ಸಚಿವರು ಕೂಡಲೇ ರಾಜೀನಾಮ ನೀಡಬೇಕೆಂದು ಕೆ ನೀಲಾ ಆಗ್ರಹಿಸಿದರು.

ಪಿಎಸ್ಐ ಆಕ್ರಮದಲ್ಲಿ ನೊಂದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆಗೆ ಸರಕಾರ ಅವಕಾಶ ನೀಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಈ ಸಂಧರ್ಬದಲ್ಲಿ ಜಗದೇವಿ ನೂಲಕರ್, ಮೇಘರಾಜ್ ಕಠಾರೆ, ಎಂಬಿ ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ: ಪಿ.ಎಸ್.ಐ.ನೇಮಕಾತಿ ಅಕ್ರಮ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here