ಸುರಪುರ: ಸುರಪುರ ವಿಧಾನಸಭಾ ಕ್ಷೇತ್ರದ ಸುರಪುರ ಮತ್ತು ಹುಣಸಗಿ ತಾಲೂಕುಗಳ ವ್ಯಾಪ್ತಿಯ ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ನೀಡುತ್ತಿದ್ದು ಬಿಜೆಪಿ ಪಕ್ಷದ ಎಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆಯನ್ನು ನೀಡಿರುವ ಅವರು, ನೊಂದವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೊದರೆ ದೂರನ್ನು ಸ್ವಿಕರಿಸದೆ ಅವರ ಮೇಲೆಯೇ ಕೇಸು ದಾಖಲಿಸುತ್ತಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಿದರು ಯಾವುದೆ ಕ್ರಮ ತೆಗೆದುಕೊಳ್ಳದೆ ಬಿಜೆಪಿ ಪಕ್ಷದ ಎಂಜೆಂಟರಂತೆ ವರ್ತಿಸಿ ಪ್ರಕರಣಕ್ಕೆ ಸಂಬಂಧವಿರದ ವ್ಯಕ್ತಿಗಳನ್ನು ವಿಚಾರಣೆಗೆಂದು ಕರೆದು ದೈಹಿಕವಾಗಿ ಹಲ್ಲೆ ನಡೆಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಇಷ್ಟಲ್ಲದೆ ನಿರಾಪರಾಧಿಗಳಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಅಟ್ಟುತ್ತಿದ್ದಾರೆ.
ಉದಾಹರಣೆಗೆ ಚಂದಲಾಪುರ, ಬೇವಿನಾಳ ಎಸ್.ಹೆಚ್. ಗ್ರಾಮಗಳಲ್ಲಿನ ಘಟನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದು ಬಿಜೆಪಿ ಪಕ್ಷದ ಮುಖಂಡರು ಹೇಳಿದಂತೆ ಕೇಳುತ್ತಿದ್ದಾರೆ. ಪ್ರತಿ ದೂರು ನೀಡಲು ಹೊದರೆ ವಾರಗಳ ವರೆಗೆ ಅಲೆದಾಡಿಸಿ ಮೊಕದ್ದಮೆ ದಾಖಲಿಸದೆ ಠಾಣೆಯ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕುತ್ತಾ ನೊಂದವರಿಗೆ ಅನ್ಯಾಯ ವೆಸಗುತ್ತಿದ್ದಾರೆ. ಇಂತಹ ಪ್ರಕರಣಗಳು ಕ್ಷೇತ್ರದ ಪೊಲೀಸ್ ಠಾಣೆಗಳಲ್ಲಿ ಸರ್ವೆಸಾಮನ್ಯವಾಗಿ ಕಂಡುಬರುತ್ತಿವೆ.
ಇನ್ನು ಹುಣಸಗಿ ತಾಲೂಕಿನಾದ್ಯಂತ ಮಟಕ, ಇಸ್ಪೀಟು, ಕೋಳಿ ಪಂದ್ಯ, ಕ್ರಿಕೇಟ ಬೆಟ್ಟಿಂಗ, ಗಾಂಜಾ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದು ಈ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸರು ಬೆನ್ನೆಲುಬಾಗಿ ನಿಂತಿದ್ದಾರೆ. ಇಷ್ಟು ಅವ್ಯಾಹತವಾಗಿ ಅಕ್ರಮಗಳನ್ನು ನಡೆಸಿ ಅಮಾಯಕ ಜನರ ಮೇಲೆ ಅಧಿಕಾರಿಗಳು ಖಾಕಿ ದರ್ಪತೊರುತ್ತಿರುವುದು ವಿರ್ಪಯಾಸವೆ ಸರಿ ! ಪೊಲೀಸ್ ಇಲಾಖೆಯ ಅಧಿಕಾರಿಗಳು ಸಂಬಳ ಪಡೆಯುತ್ತಿರುವುದು ಸಾರ್ವಜನಿಕರ ತೆರಿಗೆ ಹಣದಲ್ಲಿ ಹೊರತು ಬಿಜೆಪಿ ಪಕ್ಷದಿಂದಲ್ಲಾ ಎಂಬುದು ಗಮನವಿಟ್ಟು ಕೊಂಡು ಕರ್ತವ್ಯ ನಿರ್ವಹಿಸಬೇಕು.
ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಬೇಕೆಂದು ಇಲಾಖೆಯಲ್ಲಿ ನಿಯಮವಿದ್ದರು ಸಹ ಸುರಪುರ ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ನೆಪದಲ್ಲಿ ವಿನಾಕಾರಣ ಹಳ್ಳಿಜನರ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವುದು ಸರ್ವ ಸಾಮಾನ್ಯವಾಗಿದೆ.
ಈ ಎಲ್ಲಾ ವಿಷಯಗಳ ಕುರಿತು ಸಾಕಷ್ಟು ಬಾರಿ ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೆ ಕ್ರಮಕೈಗೊಳ್ಳದೆ ನಿರ್ಲಕ್ಷವಹಿಸಿರುವುದನ್ನು ಗಮನಿಸಿದರೆ ಇಲಾಖೆಯ ಹಿರಿಯ ಅಧಿಕಾರಿಗಳುಕೂಡ ಅವ್ಯವಹಾರಗಳಲ್ಲಿ ಪಾಲಿರುವುದು ಸ್ಪಷ್ಟವಾಗಿ ಗೊಚರಿಸುತ್ತದೆ.
ಈಗಲಾದರು ಸಹ ಅಧಿಕಾರಿಗಳು ಎಚ್ಚೆತ್ತುಕೊಂಡು ಒಂದು ವಾರದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟಲು ಕ್ರಮವಹಿಸಬೇಕು. ಮತ್ತು ಅಮಾಯಕ ಜನರ ಮೇಲೆ ದಾಖಲಿಸಿರುವ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕು ಅಮಾಯಕರಿಗೆ ನ್ಯಾಯ ಒದಿಗಿಸಬೇಕು, ಒಂದು ವೇಳೆ ಈ ಎಲ್ಲಾ ವಿಷಯಗಳನ್ನು ಗಂಭಿರವಾಗಿ ಪರಿಗಣಿಸದೆ ಹೊದರೆ ಪೊಲೀಸ ಇಲಾಖೆಯ ವಿರುದ್ಧ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಸುರಪುರ ಪಟ್ಟಣವನ್ನು ಸಂಪೂರ್ಣವಾಗಿ ಬಂದಮಾಡಿ ಉಗ್ರವಾದ ಹೊರಾಟ ನಡೆಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿರುವುದಾಗಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.