ಅನರ್ಬ್ ಗೋಸ್ವಾಮಿಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

0
38

ಕಲಬುರಗಿ: ಪತ್ರಕರ್ತ ಅನರ್ಬ್ ಗೋಸ್ವಾಮಿ ಅವರ ವಾಟ್ಸಪ್ ಚಾಟ್ ದಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದಲ್ಲದೇ ದೇಶದ 40 ಸೈನಿಕರ ಸಾವನ್ನು ಸಂಭ್ರಸಿರುವ ರೀಪಬ್ಲಿಕ್ ವಾಹಿನಿಯ ಪ್ರಸಾರ ಸ್ಥಗಿತಗೊಳಿಸಿ ಅನರ್ಬ್ ಮೇಲೆ ದೇಶದ್ರೋಹದ ಪ್ರಕರಣ ನಡೆಸಿ ಕೇಂದ್ರ ಸರಕಾರ ಭದ್ರತೆಯ ಕುರಿತು ಯಾವುದೇ ರಾಜಿ ಮಾಡಿಕೊಳ್ಳಲ್ಲ ಎಂದು ಸಾಬಿತು ಪಡಿಸಲಿ ಎಂದು ಎಸ್.ಡಿ.ಪಿ ಐ ಪಕ್ಷದ ಕಾರ್ಯಕರ್ತುರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

ಸರಕಾರದ ಪ್ರಮುಖ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡ ಅನರ್ಬ್ ಗೋಸ್ವಾಮಿ ರಾಷ್ಟ್ರೀಯ ಭದ್ರತೆಯ ವಿಷಯಗಳನ್ನು ಕುರಿತು ಮಾಹಿತಿಯನ್ನು ಹಂಚಿಕೊಂಡು ಭದ್ರತೆಗೆ ಧಕ್ಕೆ ತಂದಿದ್ದು, ಕೇಂದ್ರ ಸರಕಾರ ವಿಷಯದಲ್ಲಿ ಜಾಣ ಕುರಡರಂತೆ ವರ್ತಿಸುತ್ತಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೀಜ್ವಾನ್ ಅಹ್ಮದ್ ಆರೋಪಿಸಿದ್ದಾರೆ.

Contact Your\'s Advertisement; 9902492681

ಸಂಘ ಪರಿವಾರದ ದೊಡ್ಡ ದೇಶಭಕ್ತಿಯ ಕೂಗುಗಳು ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಹಾಳು ಮಾಡಲು ದೊಡ್ಡ ಪರದೆ ಹಿಂದಿನ ತಂತ್ರವನ್ನು ಮುಚ್ಚಿಹಾಕಲು ಮಾಡುತ್ತಿರುವ ಮುಖವಾಡ ಈ ಘಟನೆಯ ಮೂಲಕ ಬೆಳಕಿಗೆ ಬಂದಿದೆ. ರಾಷ್ಟ್ರದ ಭದ್ರತೆಗೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಟಿಆರ್‌ಪಿ ರೇಟಿಂಗ್‌ ಪಾಯಿಂಟ್‌ ಹೆಚ್ಚಿಸಿ, ಖಾಸಗಿ ವ್ಯಕ್ತಿಗಳ ವ್ಯಾಪಾರ ಹೆಚ್ಚಿಸಲು ರಾಷ್ಟ್ರದ ಭದ್ರತೆಯನ್ನು ಮಾರುಕಟ್ಟೆ ಸರಕಾಗಿಸಲು  ಅನುಮತಿಸಬಾರದು ಎಂದು ಒತ್ತಾಯಿಸಿದ್ದರು.

ಈ ಬಗ್ಗೆ ಕುಲಂಕುಶ ಉನ್ನತ ಮಟ್ಟದ ತನಿಖೆ ನಡೆಸಲು ತಂಡ ನೇಮಿಸಿ, ಅರ್ನಾಬ್‌ ನನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಿ, ಗೌಷ್ಯ ಮಾಹಿತಿ ಪಡೆಯಲು ಸಹಾಯ ಮಾಡಿದ ಎಲ್ಲರ ವಿರುದ್ಧ ಕ್ರಮಕೈಹೊಳ್ಳಬೇಕೆಂದು ಪ್ರತಿಭಟನಾ ನೀರತ ಹೋರಾಟಗಾರರು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಸೈಯದ್‌ ಅಲೀಮ್‌ ಇಲಾಹಿ, ಪಂಚಾಯಿತ್ ಸದಸ್ಯರಾದ ಶಕೀಲ್ ಪಾಷಾ ಭಂಕೂರು, ಪಕ್ಷದ ಕೌನ್ಸಿಲ್ ಸದಸ್ಯರಾದ ಮೊಹಮ್ಮದ್ ಮೋಹಸಿನ್, ಸೈಯದ್‌ ಉದ್ದೀನ್‌ ಫಾರೂಕ್ ಪಕ್ಷದ ಸದಸ್ಯರ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here