ಕಲಬುರಗಿ: ಕೃಷಿ ಇಲಾಖೆಯಿಂದ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ರೈತರು ಇದರ ಲಾಭ ಪಡೆಯಬೇಕೆಂದು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ರೈತರು ಬೆಳೆಗಳಿಗೆ ಕೀಟ, ರೋಗ, ಕಳೆ, ಪೋಷಕಾಂಶಗಳ ಕೊರತೆ, ಮಣ್ಣು ಆರೋಗ್ಯ ಕುರಿತು ತಾಕುಗಳ ಸಂಬಂಧಪಟ್ಟ ಮಾಹಿತಿಯನ್ನು ಉಚಿತ ಸಹಾಯವಾಣಿ ಸಂಖ್ಯೆ 155313ಕ್ಕೆ ಬೆಳಿಗ್ಗೆ 10 ರಿಂದ 5.30 ಗಂಟೆಯವರೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.