ಕಾವಿಗೆ ಬೆಲೆ, ಪೀಠಕ್ಕೆ ಗೌರವ, ಕ್ಷೇತ್ರಕ್ಕೆ ವಿಶ್ವ ಮನ್ನಣೆ ತಂದು ಕೊಟ್ಟವರು ಸಿದ್ಧಗಂಗಾ ಶ್ರೀಗಳು

0
99

ಶಹಾಬಾದ:ಕಾವಿಗೆ ಬೆಲೆ, ಪೀಠಕ್ಕೆ ಗೌರವ, ಕ್ಷೇತ್ರಕ್ಕೆ ವಿಶ್ವ ಮನ್ನಣೆ ತಂದು ಕೊಟ್ಟ ಮಹಾನ್ ಚೇತನ ಶಕ್ತಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಎಂದು ವೀರಶೈವ ಸಮಾಜದ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ ಹೇಳಿದರು.

ಅವರು ನಗರದಲ್ಲಿ ಆಯೋಜಿಸಲಾದ ತುಮಕೂರಿನ ಸಿದ್ಧಗಂಗಾ ಮಠದ ಪರಮ ಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಇಂದಿಗೂ ಜನರಲ್ಲಿ ಏನಾದರೂ ಕಾವಿಗೆ ಬೆಲೆ ಮತ್ತು ಖದರ್ ಇದಿದ್ದೆಯಾದರೆ ಅದು ಶಿವಕುಮಾರ ಸ್ವಾಮೀಜಿಯಂತವರಿಂದ.ಅವರು ಯಾವುದೇ ಜಾತಿ-ಭೇಧವಿಲ್ಲದೇ ಹನ್ನೆರಡನೇಯ ಶತಮಾನದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಾದಿ ಶರಣರ ವಿಚಾಧಾರೆ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಿದ ಮಹಾಶಿವಯೋಗಿಗಳು ಎಂಬ ಖ್ಯಾತಿಗೆ ಪಾತ್ರರಾದವರು.ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳೆಂಬ ಪ್ರೀತಿಯ ಅಭಿಮಾನ ಪಡೆದಿದ್ದಾರೆ.ಅವರಿಗೆ ನಮ್ಮ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ ಎಂದು ಹೇಳಿದರು.

ಶರಣಗೌಡ ಪಾಟೀಲ ಗೋಳಾ ಮಾತನಾಡಿ, ಎಪ್ರಿಲ್ ಒಂದರಂದು ಮೂರ್ಖರ ದಿನ ಎಂದು ಆಚರಿಸುತ್ತೆವೆ.ಆದರೆ ಅದೇ ದಿನದಂದು ಹುಟ್ಟಿದ ಶ್ರೀಗಳು ತಮ್ಮ ಸತ್ಯ ಶುದ್ಧಕಾರ್ಯ ಪ್ರಜ್ಞೆ ಹಾಗೂ ನಿಷ್ಕಾಮ ಭಾವದಿಂದ ಮೂರ್ಖರ ದಿನವನ್ನು ಜ್ಞಾನಿಗಳ ದಿನವನ್ನಾಗಿ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.ಯಾರಲ್ಲಿ ಬಸವಣ್ಣನವರ ತತ್ವ ಅನುಷ್ಠಾನಗೊಂಡಿರುತ್ತದೆಯೋ, ಅವರಲ್ಲಿ ಮೂಡನಂಭಿಕೆ, ಅಂಧಶ್ರದ್ದೆಗಳು ಎಂದಿಗೂ ಮನೆ ಮಾಡುವುದಿಲ್ಲ ಎಂಬುದಕ್ಕೆ ಶ್ರೀಗಳೇ ಉದಾಹರಣೆ ಎಂದರು.

ಉದ್ಯಮಿ ನರೇಂದ್ರ ವರ್ಮಾ, ಡಾ.ರಶೀದ್, ಪ್ರದೀಪ ಗೊಳೇದ್, ಶರಣಬಸಪ್ಪ ಕೋಬಾಳ, ಶರಣು ಪಗಲಾಪೂರ,ಸೂರ್ಯಕಾಂತ ಕೋಬಾಳ,ಮಲ್ಲಿಕಾರ್ಜುನ ವಾಲಿ, ಬಸವರಾಜ ಬಿರಾದಾರ, ಶೋಭಾ ನಾಟೇಕಾರ,ನಾಗೇಂದ್ರ ನಾಟೇಕಾರ, ಭಾಗಿರಥಿ ಗುನ್ನಾಪೂರ,ಅಣೆಪ್ಪ ದಸ್ತಾಪೂರ, ನಿಂಗಣ್ಣ ಹುಳಗೋಳಕರ್, ಬಾಬುರಾವ ಪಂಚಾಳ, ಪ್ರಶಾಂತ ಮರಗೋಳ, ರಾಜು ಬೆಳಗುಂಪಿ,ಸುಭಾಷ ಜಾಪೂರ, ಭೀಮಯ್ಯ ಗುತ್ತೆದಾರ,ಪುರುಷೋತ್ತಮ ಮಂತ್ರಿ, ದಿನೇಶ ಗೌಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here