ಸುರಪುರ: ಭಾರತೀಯ ಸ್ಟೇಟ್ ಬ್ಯಾಂಕ್‌ಲ್ಲಿ ಸಾಲ ಪಡೆದ ರೈತರು ಸಾಲ ಕಟ್ಟದೆ ಇದ್ದವರು ಸಾಲದಲ್ಲಿ ಕೇವಲ ಪ್ರತಿಶತ ೧೦% ರಷ್ಟು ಮರು ಪಾವತಿ ಮಾಡಿದರೆ ಇನ್ನುಳಿದ ಶೇ ೯೦% ಸಾಲ ಮನ್ನಾ ಯೋಜನೆಯನ್ನು ಸರಕಾರ ಘೋಷಿಸಿರುವುದು ಸಂತೋಷದ ಸಂಗತಿಯಾಗಿದೆ. ಆದರೆ ೧೦% ಸಾಲ ಮರು ಪಾವತಿ ಮಾಡಲು ರೈತರಿಗೆ ಜನೆವರಿ ೩೦ನೇ ತಾರೀಖು ಕೊನೆ ದಿನ ನಿಗದಿ ಪಡಿಸಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತವಾಗಿದೆ.
ಈಗಾಗಲೆ ಕೋವಿಡ್‌ನಿಂದ ಸಂಕಷ್ಟದಲ್ಲಿರುವ ರೈತರು ಹಣವಿಲ್ಲದೆ ಬೇರೆಯವರಲ್ಲಿ ಸಾಲ ತಂದು ಬ್ಯಾಂಕ್‌ಗೆ ಕಟ್ಟ ಬೇಕಿದೆ.ಆದ್ದರಿಂದ ರೈತರು ಹಣವನ್ನು ಹೊಂದಿಸಿಕೊಳ್ಳಲು ಇನ್ನು ಒಂದು ತಿಂಗಳು ಕಾಲವಕಾಶ ಹೆಚ್ಚುಗೊಳಿಸಬೇಕು.ಅಂದರೆ ಫೆಬ್ರವರಿ ೨೮ನೇ ತಾರೀಖಿನ ವರೆಗೆ ಕಾಲವಕಾಶ ನೀಡಬೇಕೆಂದು ಅಖಿಲ ಕರ್ನಾಟಕ ನಿಖೀಲ್ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಯುವ ಒಕ್ಕೂಟ ತಮ್ಮಲ್ಲಿ ಮನವಿ ಮಾಡುತ್ತದೆ ಎಂದು ಎಸ್‌ಬಿಐ ಸಿಬ್ಬಂದಿ ಮೂಲಕ ಹಣಕಾಸು ಇಲಾಖೆ ಕಾರ್ಯದರ್ಶಿಯವರಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ ಗೋಪಾಲ ಬಾಗಲಕೋಟೆ ಮಾನಯ್ಯ ದೊರೆ ಬಾಬುಮಿಯಾ ನಬಿಲಾಲ ಮಹ್ಮದಸಾಬ್ ಸೇರಿದಂತೆ ಅನೇಕರಿದ್ದರು.