ರೈತರ ಹೋರಾಟಕ್ಕೆ ಎಐಡಿಎಸ್‌ಒ ಬೆಂಬಲ

0
50

ವಾಡಿ: ದೇಶದ ಅನೇಕ ಭಾಗಗಳಿಂದ ಮತ್ತು ದೆಹಲಿಯ ವಿವಿಧ ಭಾಗಗಳಿಂದ ಜನವರಿ ೨೬ ರಂದು ಕಿಸಾನ್ ಪೆರೇ??ನ ಅತ್ಯಂತ ಶಿಸ್ತುಬದ್ಧ ರೀತಿಯಲ್ಲಿ ಸಂಘಟಿತರಾಗಿ ಹೋರಾಟನಿರತರಾಗಿದ್ದ ರೈತರಿಗೆ ಎಐಡಿಎ??ಓ ಕ್ರಾಂತಿಕಾರಿ ಶುಭಾಶಯಗಳನ್ನು ಕೋರಿದೆ. ಜನವರಿ ೨೬ ರಂದು ನಡೆದ ಕಿಸಾನ್ ಮೆರವಣಿಗೆಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಕೃಷಿ ವಿರೋಧಿ ಕಾಯ್ದೆಗಳ ವಿರುದ್ಧ ಬಿಜೆಪಿ ಮತ್ತು ಅವರ ಮಾಲೀಕರಾದ ಕಾರ್ಪೋರೇಟ್ ಸಂಸ್ಥೆಗಳಿಗೆ ಭಾರಿ ಹೊಡೆತವಾಗಿದೆ. ಈ ಮೆರವಣಿಗೆಯು, ಕೃಷಿ ವಿರೋಧಿ ಕಾಯ್ದೆಗಳು ಕೇವಲ ರೈತರ ಜೀವನವನ್ನು ಮಾತ್ರವಲ್ಲದೇ, ಸಮಾಜದ ಎಲ್ಲಾ ವರ್ಗದ ಜನಜೀವನವನ್ನು ಹೇಗೆ ಹಾಳುಗೆಡವುತ್ತದೆ ಎಂಬುದನ್ನು ಧೃಡಪಡಿಸುತ್ತದೆ. ಈ ಆಂದೋಲನವು ಬಲಗೊಳ್ಳುತ್ತಿರುವ ರೀತಿಯೇ ಚಳುವಳಿಯ ವಿಜಯದ ಬಗ್ಗೆ ವಿಶ್ವಾಸ ಮೂಡಿಸಿದೆ. ಮತ್ತು ಪ್ರಸ್ತುತ ದಮನಕಾರಿ ಆಡಳಿತವಾದ ಕೇಂದ್ರ ಬಿಜೆಪಿ ಸರ್ಕಾರವನ್ನು ಬೆಚ್ಚಿ ಬೀಳಿಸಿದೆ. ಆದರೆ ಕೆಲವು ಕಾರ್ಯಕರ್ತರು ದುಸ್ಸಾಹಸಕ್ಕೆ ಕೈಹಾಕಿ ಕೆಲವು ಅಹಿತಕರ ಘಟನೆಗಳಿಗೆ ಎಐಡಿಎಸ್‌ಒ ವಿಷಾದ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಶಾಂತಿಯುತ ಹೋರಾಟದ ದಿಕ್ಕು ತಪ್ಪಿಸುವ ಕೇಂದ್ರ ಬಿಜೆಪಿ ಸರಕಾರ ಗೂಂಡಾಗಳನ್ನು ಬಳೆಸಿಕೊಂಡಿದೆ. ನಿಜವಾದ ಪ್ರಜಾತಾಂತ್ರಿಕ ಹೋರಾಟವನ್ನು ಹತ್ತಿಕ್ಕುವಲ್ಲಿ, ಆಡಳಿತ ಮತ್ತು ಪ್ರತಿಗಾಮಿ ಶಕ್ತಿಗಳಿಗೆ ಅವಕಾಶ ಕೊಟ್ಟಂತಾಗುತ್ತದೆ. ಇದು ಚಳುವಳಿಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾರ್ಪೋರೇಟ್ ಪರ ಸರ್ಕಾರಕ್ಕೆ ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಪುಷ್ಟಿ ನೀಡಿದೆ. ಇಂತಹ ಘಟನೆಗಳು ಸಾಮೂಹಿಕ ಮಟ್ಟದ ಕಾರ್ಯಕ್ರಮಗಳನ್ನು ನಡೆಸುವಾಗ ಹೆಚ್ಚು ಜಾಗರೂಕರಾಗಿರಲು ಕಲಿಸುತ್ತವೆ. ಅಲ್ಲದೇ ಈ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನೇ ಉಪಯೋಗಿಸಿಕೊಳ್ಳುತ್ತಾ ೨೮ ರಂದು ತಡರಾತ್ರಿ ಪೋಲಿಸ್ ಹಾಗೂ ಗೂಂಡಾ ಪಡೆ ಗಾಜೀಪುರ ಗಡಿಯ ಬಳಿ ಸೇರಿರುವ ರೈತರನ್ನು ಎಬ್ಬಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.

Contact Your\'s Advertisement; 9902492681

ಪ್ರಾರಂಭದಿಂದಲೂ ರೈತರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಎಐಡಿಎ??ಒ ನಮ್ಮ ದೇಶದ ರೈತರ ಕರೆಗೆ ಬದ್ಧವಾಗಿದ್ದು ಅದನ್ನು ಬಲಗೊಳಿಸುವಲ್ಲಿ ಮತ್ತು ವಿವಿಧ ಅಡ್ಡದಾರಿಗಳಿಂದ, ಆಳುವ ವರ್ಗದ ದಾಳಿಗಳಿಂದ ಅದನ್ನು ಉಳಿಸಲು, ಹಾಗೂ ಚಳುವಳಿಯೊಂದಿಗೆ ಧೃಡವಾಗಿ ನಿಲ್ಲುವಂತೆ ಅದಕ್ಕೆ ಸಹಾಯಮಾಡಲು ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಕರೆನೀಡಿದೆ. ಕಾಲಹರಣ ಮಾಡುವ ತನ್ನ ನೀತಿಯನ್ನು ನಿಲ್ಲಸಿ, ಕೃಷಿ ವಿರೋಧಿ ಕಾಯ್ದೆಗಳು ಮತ್ತು ವಿದ್ಯುತ್ ಮಸೂದೆ ೨೦೨೦ ಗಳನ್ನು ಈ ಕೂಡಲೇ ಹಿಂದೆಗೆದುಕೊಳ್ಳುವಂತೆ ಎಐಡಿಎ??ಒ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತದೆ ಎಂದು ಪ್ರತಿಕ್ರೀಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here