ದೆಹಲಿ ದಂಗೆಯ ಹಿಂದೆ ಬಿಜೆಪಿ-ಆರ್‌ಎಸ್‌ಎಸ್ ಕೈವಾಡ: ಅರ್‌ಕೆಎಸ್ ಗಂಭೀರ ಆರೋಪ

0
64

ವಾಡಿ: ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಜ.೨೬ ರಂದು ದೇಹಲಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಮಸಿ ಬಳಿಯಲು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪಿತೂರಿ ನಡೆಸಿದ್ದರ ಪರಿಣಾಮ ಹಿಂಸಾಚಾರ ಘಟಿಸಿದೆ ಎಂದು ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಗಂಭೀರ ಆರೋಪ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆರ್‌ಕೆಎಸ್ ಚಿತ್ತಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ದಂಡಬಾ, ರೈತರ ಸಂಘಟಿತ ಹೋರಾಟಕ್ಕೆ ನಡುಗಿದ ಕೇಂದ್ರ ಬಿಜೆಪಿ ಸರಕಾರ ಹೋರಾಟಗಾರರನ್ನು ಬಂಧಿಸಲು ತಂತ್ರ ಕುತಂತ್ರಗಳನ್ನು ಮಾಡಿ ಅಧಿಕಾರ ದುರುಪಯೋಗಪಡೆಸಿಕೊಂಡಿದೆ ಎಂದು ದೂರಿದರು. ರೈತರ ಚಳುವಳಿಯೊಳಗೆ ಪ್ರಚೋದಕರು ನುಸುಳುವಂತೆ ಮಾಡಿ ದಂಗೆ ಸೃಷ್ಠಿಸಲಾಯಿತು. ರೈತರ ವೇಶದಲ್ಲಿದ್ದ ಪ್ರಚೋದಕರ ಗುಂಪು ಕೆಂಪು ಕೋಟೆಗೆ ನುಗ್ಗಲು ಅಲ್ಲಿನ ಪೊಲೀಸರೇ ಅನುಕೂಲ ಮಾಡಿಕೊಟ್ಟಿರುವುದು ಸ್ಪಷ್ಟವಾಗಿದೆ. ಈ ಕುರಿತು ಸಾಕಷ್ಟು ಸಾಕ್ಷಿಗಳು ರೈತ ನಾಯಕರಿಗೆ ದೊರೆತಿವೆ. ಈಗ ಮತ್ತೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ತನ್ನ ದೊಡ್ಡ ಸಂಖ್ಯೆಯನ್ನು ಸೇರಿಸಿದೆ. ಅವರನ್ನು ಅರೆಸೇನಾಪಡೆಯೊಂದಿಗೆ ಬೆರೆಸಿ ರೈತರ ಚಳುವಳಿ ಹತ್ತಿಕ್ಕಲು ಮುಂದಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ದೇಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತರ ಚಳುವಳಿ ನಮ್ಮ ದೇಶದ ದುಡಿಯುವ ಜನತೆಯಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ. ಎಲ್ಲಾ ರೀತಿಯ ಅಡೆತಡೆಗಳನ್ನು ಕಿತ್ತೊಗೆದು ಗುರಿ ಮುಟ್ಟುವ ವರೆಗೂ ಚಳುವಳಿಯನ್ನು ಮುಂದುವರೆಸುವ ಅದಮ್ಯ ಸ್ತೈರ್ಯಕ್ಕೆ ರೈತರು ಸಾಕ್ಷಿಯಾದರು. ಆ ಚಳುವಳಿಯಲ್ಲಿ ೧೫೩ ಜೀವಗಳು ಪ್ರಾನಾರ್ಪಣೆ ಮಾಡಿದ್ದು, ಹಿಂದೆಂದೂ ಕೇಳರಿಯದ ಘಟನೆಗಳಿಗೆ ಎದೆಯೊಡ್ಡಿದರು. ಮೂರು ರೈತ ವಿರೋಧಿ, ಕಾರ್ಪೋರೇಟ್ ಪರ ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ಕಾಯ್ದೆ ೨೦೨೦ ಅನ್ನುಹಿಂತೆಗೆದುಕೊಳ್ಳುವಂತೆ ಬಿಜೆಪಿ ಸರಕಾರವನ್ನು ಒತ್ತಾಯಿಸಲು ರೈತ ಸೈನ್ಯ ಸಜ್ಜಾಗಿ ನಿಂತಿರುವುದು ದೇಶದ ಅನ್ನದಾತರಲ್ಲಿ ನವಚೈತನ್ಯ ತುಂಬಿದೆ. ಸರಕಾರದ ದಮನಕಾರಿ ನಿರ್ಧಯಿ ಕ್ರಮಗಳಿಗೆ ಎದೆಗುಂದದೆ, ಈ ಸಶಸ್ತ್ರ ಫ್ಯಾಸಿಸ್ಟ್ ವಿನ್ಯಾಸವನ್ನು ಪ್ರತಿರೋಧಿಸಲು ಮತ್ತು ಚಳುವಳಿಯನ್ನು ವಿಜಯಗೊಳಿಸಲು ರೈತರೊಂದಿಗೆ ದೇಶದ ಜನತೆ ಎದ್ದುನಿಲ್ಲಬೇಕು ಎಂದು ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here