ಸಹಕಾರ ಕ್ಷೇತ್ರ ಬಲಗೊಳ್ಳುತ್ತಿರುವುದು ಸಂತೋಷ: ಗುರುನಾಥ ಜಾಂತೀಕರ

0
45

ಕಲಬುರಗಿ: ನಗರದ ಟ್ಯಾಂಕ್ ಬಂಡ ರಸ್ತೆಯಲ್ಲಿರುವ ಕಲ್ಯಾಣಿಕಲ್ಯಾಣ ಮಂಟಪ ಹತ್ತಿರ ಹೋಟೆಲ್ ಸಪ್ತಗಿರಿಯಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ಪ್ರಾಂತೀಯ ಕಛೇರಿಯ ವತಿಯಿಂದ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು/ ಮುಖ್ಯಕಾರ್ಯನಿರ್ವಾಹಕರಿಗಾಗಿ ವಿಷಯಾಧಾರಿತ ತರಬೇತಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಬಸವೇಶ್ವರ ಸುದ್ಧಿ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತೀಕರ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಇಂದು ಸೌಹಾರ್ದ ಚಳುವಳಿವು ಕರ್ನಾಟಕ ಸಹಕಾರಕ್ಷೇತ್ರವನ್ನು ಬಲಗೊಳಿಸುತ್ತಿರುವುದು ತುಂಬಾ ಸಂತೋಷವಾಗಿದೆ, ಇದರಿಂದಾಗಿರಾಜ್ಯದಲ್ಲಿ ಕೇವಲ ಒಂದು ವಯೋಮಾನಕ್ಕೆ ಸಿಮ್ಮಿತವಾಗಿದ್ದ ಸಹಕಾರ ಚಳುವಳಿವು ಇಂದುಯುವಕರು ಸಹ ಈ ಚಳುವಳಿಯಲ್ಲಿ ತೊಡಗಿಸಿಕೊಳ್ಳಲು ಅನೂಕೂಲಕರವಾಗಿದೆಆದ್ದರಿಂದಅವರಕ್ರೀಯಾತ್ಮಕಯೋಚನೆಆಲೋಚನೆಯಿಂದಾಗಿ ಸಹಕಾರ ಚಳುವಳಿಯಲ್ಲಿ ಹೊಸ ಆಯಾಮವನ್ನು ನೀಡುವ ಮುಖಾಂತರ ಸದಸ್ಯ ಸಹಕಾರಿಗಳಿಗೆ ಸುಲಭರೀತಿಯಲ್ಲಿ ಸೇವೆಯನ್ನು ಒದಗಿಸಿತ್ತಿರುವುದು, ಇಂದು ನಾವು ಕಾಣುತ್ತಿದ್ದೇವೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ನಿರ್ದೇಶಕ ಸಂಜೀವ ಮಹಾಜನ ಅವರು ಮಾತನಾಡಿ ಸಹಕಾರಿಗಳು ಸಂಯುಕ್ತ ಸಹಕಾರಿ ನಡೆಸುವತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಅದರ ಲಾಭವನ್ನುತಾವೆಲ್ಲಾ ಪಡೆದಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಯುಕ್ತ ಸಹಕಾರಿಯ ಮಾಜಿ ವೃತಿಪರ ನಿರ್ದೇಶಕ ರಾಜಶೇಖರ ಬಿ ಹಾಗೂ ಸಂಯುಕ್ತ ಸಹಕಾರಿಯ ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ ಹೆಚ್, ವೈ.ವಿಗುಂಡುರಾವ, ಶಶಿಶೇಖರ ರೆಡ್ಡಿ, ಗುರುಶಾಂತಯ್ಯಾ  ಉಪಸ್ಥಿತರಿದ್ದರು.

ಈ ಸಭೆಯಲ್ಲಿಒಟ್ಟು ೧೩೨ ಸೌಹಾರ್ದ ಸಹಕಾರಿಗಳ ಪ್ರತಿನಿಧಿಗಳು ಭಾಗವಹಿಸಿದರು ಸ್ವಾಗತ ಮತ್ತುಪ್ರಾಸ್ತವಿಕ ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ ಹೂಗಾರ ಇವರು ನೇರವೇರಿಸಿದರು.  ಜಿಲ್ಲಾ ಸಂಯೋಜಕ ಓಂಕಾರ ಅವರು ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here