ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ

0
46

ಕಲಬುರಗಿ: ಕೋವಿಡ್ ೧೯ ಸೋಂಕಿಗಿನಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶುಲ್ಕ ವಸೂಲಿಗಾಗಿ ಪಾಲಕರಿಗೆ ಬೇಕಾಬಿಟ್ಟಿ ಹಣ ವಸೂಲಿಗಿಳಿದಿರುವ ಶಾಲಾ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಮಿತಿಯ ಅಧ್ಯಕ್ಷ ಸಚೀನ್ ಪರತಾಬಾದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ, ಕೋವಿಡ್ ಸಮದಲ್ಲಿನ ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳಲ್ಲಿಯ ವಿದ್ಯಾರ್ಥಿಗಳಿಗೆ ಕನಿಷ್ಟ ಶುಲ್ಕ ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಬರುವ ಮಾರ್ಚ ೨೦೨೧-೨೨ನೇ ಶೈಕ್ಷಣಿಕ ವರ್ಷಕ್ಕಾಗಿ ಪೂರ್ಣ ಪ್ರಮಾಣ ಶುಲ್ಕವನ್ನು ತೆಗೆದುಕೊಳ್ಳಬಹುದು, ಆದರೆ ಈಗಾಗಲೇ ಲಾಕ್‌ಡೌನ್‌ನಲ್ಲಿ ಆನ್‌ಲೈನ್‌ನಲ್ಲಿ ಅಭ್ಯಾಸ ಮಾಡಿರುವ ವಿದ್ಯಾಥಿಗಳಿಗೆ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್, ದುಬಾರಿ ಮೋಬೈಲ್, ಲ್ಯಾಪಟಾಪ್‌ಗಳ ತಂದಹ ಸಲಕರಣೆಗಳನ್ನು ಖರೀದಿ ಮಾಡಿದ್ದು, ಸಾಲಸೂಲದಿಂದ ಈಗ ಅದೇ ಸಾಲ ತೀರಿಸಲು ಹಣವಿಲ್ಲದೇ, ಅಲ್ಲದೇ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವ ಪಾಲಕರು ಕೂಡಾ ಈ ಸಮಯದಲ್ಲಿ ನಿರುದ್ಯೋಗಿಗಳಗಾದ್ದು, ಅವರು ದುಬಾರಿ ಶುಲ್ಕ ಎಲ್ಲಿಂದ್ ತರಬೇಕು ಎಂದು ಅವರು ಪ್ರಶ್ನಸಿದ್ದಾರೆ.

ಈ ಮುಂಚೆ ಶಿಕ್ಷಣ ಸಚಿವ ಸುರೇಶಕುಮಾರ ಅವರು ಖಡಕ್ಕಾಗಿಯೇ ಶಾಲಾ ಕಾಲೇಜುಗಳ ವ್ಯವಸ್ಥಾಪಕ ಮಂಡಳಿಯಾಗಲೀ, ಆಡಳಿತ ಮಂಡಳಿಯಾಗಲೀ ಬಲವಂತದಿಂದಾಗಿ ಯಾರ ನ್ನು ಶುಲ್ಕ ಕಟ್ಟಲು ದುಂಬಾಲು ಬೀಳದೇ, ಪಾಲಕರನ್ನು ಹಣಕ್ಕಾಗಿ ಪೀಡಿಸಬಾರದು ಎಂದು ಹೇಳಿಕೆ ನೀಡಿದ್ದು, ಸರಕಾರಕ್ಕೆ ಈ ಬಗ್ಗೆ ಗಮನ ಸೆಳೆದು, ವಿದ್ಯಾರ್ಥಿಗಳ ಶುಲ್ಕವನ್ನು ಸ್ವಲ್ಪ ಪ್ರಮಾಣದಲ್ಲಿ ಪಡೆಯಲು ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಹುಲ್ ಪರತಾಬಾದ, ಅಕ್ಷಯ, ಉದಯ, ವಿವೇಕ, ನಿಹಾಲ್, ಅಭಿಷೇಕ, ರೋಹಿತ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here